ಮುಂಬೈ:ಲೋಹದ ಗಣಿಗಾರಿಕೆಯಲ್ಲಿ ತೊಡಗಿರುವ ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ (ai Balaji Industries Ltd) ಷೇರು ಕಳೆದ ವರ್ಷದಲ್ಲಿ ಹೂಡಿಕೆದಾರರಿಗೆ ದಿಗ್ಭ್ರಮೆಗೊಳಿಸುವ ಲಾಭವನ್ನು ನೀಡಿದೆ.
ಕಳೆದ ವರ್ಷ ಜನವರಿಯಲ್ಲಿ ಷೇರಿನ ಮೌಲ್ಯ 53.8 ರೂ ಎಂದು ಅಂದಾಜಿಸಲಾಗಿತ್ತು. ಜನವರಿ 17, 2024 ರಂದು, ಷೇರಿನ ಮೌಲ್ಯವು 1046.90 ಆಗಿತ್ತು. ಇದರರ್ಥ ಈ ಅವಧಿಯಲ್ಲಿ ಈ ಕಂಪನಿಯ ಷೇರು ತನ್ನ ಷೇರುದಾರರಿಗೆ 1845 ಪ್ರತಿಶತದಷ್ಟು ಲಾಭವನ್ನು ನೀಡಿದೆ.
ಅಂದರೆ, 2023ರ ಜನವರಿಯಲ್ಲಿ ಈ ಪೆನ್ನಿ ಸ್ಟಾಕ್‌ನಲ್ಲಿ ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅದು 19.4 ಲಕ್ಷ ರೂಪಾಯಿ ಆಗುತ್ತಿತ್ತು.
ಈ ತಿಂಗಳು ಜನವರಿಯಲ್ಲಿಯೇ ಈ ಸ್ಟಾಕ್ ಅಂದಾಜು 34 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. 2023ರ ಜುಲೈನಿಂದ ಈ ಷೇರು ನಿರಂತರವಾಗಿ ದೊಡ್ಡ ಪ್ರಮಾಣದ ಲಾಭವನ್ನು ಗಳಿಸುತ್ತಿದೆ..
ಈ ಸ್ಟಾಕ್ ಜುಲೈ 2023ರಿಂದ ಜನವರಿ 2024 ರ ನಡುವಿನ ಅವಧಿಯಲ್ಲಿ ಶೇಕಡಾ 1277 ಗಳಿಸಿದೆ.
ಅಲ್ಲದೆ, ಇದು ಕಳೆದ ಜುಲೈ ತಿಂಗಳೊಂದರಲ್ಲಿಯೇ ಮಲ್ಟಿಬ್ಯಾಗರ್ (ಅನೇಕ ಪಟ್ಟು) ಲಾಭವನ್ನು ನೀಡಿದೆ, ಜುಲೈ ತಿಂಗಳಲ್ಲಿ ಈ ಷೇರುಗಳ ಬೆಲೆ 106.5 ಪ್ರತಿಶತದಷ್ಟು ಏರಿಕೆ ಕಂಡಿತ್ತು. ಅಲ್ಲದೆ, ಕಳೆದ ಗಸ್ಟ್‌ನಲ್ಲಿ 72% ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ 61.4 ಪ್ರತಿಶತ, ಮೇನಲ್ಲಿ 41 %,, ಅಕ್ಟೋಬರ್ ಮತ್ತು ಏಪ್ರಿಲ್‌ನಲ್ಲಿ 31 ಪ್ರತಿಶತದಷ್ಟು ಏರಿಕೆ ಕಂಡಿದೆ. ಆದರೆ, ಇದು 2023 ಜೂನ್‌ನಲ್ಲಿ ಗರಿಷ್ಠ 10 ಪ್ರತಿಶತದಷ್ಟು ಕುಸಿದಿದೆ. 2023ರ ಮಾರ್ಚ್‌ನಲ್ಲಿ 9 ಪ್ರತಿಶತದಷ್ಟು, ಫೆಬ್ರವರಿಯಲ್ಲಿ 7 ಪ್ರತಿಶತ ಮತ್ತು ಜನವರಿಯಲ್ಲಿ ಶೇಕಡಾ 1.6 ಕುಸಿದಿತ್ತು.
2024 ರ ಜನವರಿ 17 ರಂದು ಈ ಸ್ಟಾಕ್ ತನ್ನ ದಾಖಲೆಯ ಗರಿಷ್ಠ ಮಟ್ಟವಾದ 1,046.90 ರೂಪಾಯಿಗೆ ತಲುಪಿತು. ಈ ಸ್ಟಾಕ್​ ಮಾರ್ಚ್ 28, 2023 ರಂದು 52 ವಾರಗಳ ಕನಿಷ್ಠ ಮಟ್ಟ ರೂ.42 ಇತ್ತು.
ಸ್ಟಾಕ್ ಕಳೆದ ಮೂರು ವರ್ಷಗಳಲ್ಲಿ ಶೇಕಡಾ 4,289.72% ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ, ಮೂರು ವರ್ಷಗಳ ಹಿಂದೆ ಈ ಸ್ಟಾಕ್​ನಲ್ಲಿ 2,33,154 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು ಈಗ 1 ಕೋಟಿ ರೂಪಾಯಿಗೆ ಏರಿಕೆಯಾಗುತ್ತಿತ್ತು.
ಕಂಪನಿಯು ವಾರ್ಷಿಕವಾಗಿ 4,45,000 ಟನ್‌ಗಳಷ್ಟು ಕಬ್ಬಿಣ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ, ಸರಿಸುಮಾರು 106,000 ಟನ್‌ಗಳಷ್ಟು ಫೆರೋ-ಮಿಶ್ರಲೋಹಗಳು ಮತ್ತು ವರ್ಷಕ್ಕೆ 20, 430 ಕ್ಕಿಂತ ಹೆಚ್ಚು. ಮಿಶ್ರಲೋಹಗಳನ್ನು ಉತ್ಪಾದಿಸುವ ಕ್ಷಮತೆ ಹೊಂದಿದೆ.
ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ ಪ್ರಾಥಮಿಕವಾಗಿ ಭಾರತದಲ್ಲಿ ಉಕ್ಕು ಮತ್ತು ಕಬ್ಬಿಣದ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತದೆ.
ಕಂಪನಿಯು ಸ್ಪಾಂಜ್ ಐರನ್, ಪಿಗ್ ಐರನ್, ಟಿಎಮ್‌ಟಿ ಬಾರ್, ಡಕ್ಟೈಲ್ ಐರನ್ ಪೈಪ್, ಡಿಆರ್‌ಐ, ಫೆರೋ ಕ್ರೋಮ್, ಕೋಕ್, ಸ್ಟೀಲ್ ಬಾರ್/ರಾಡ್ ಸಿಂಟರ್, ಆರ್ನಮೆಂಟಲ್ ಸ್ಟೀಲ್ ಗ್ರಿಲ್, ಪೋರ್ಟ್‌ಲ್ಯಾಂಡ್ ಸ್ಲ್ಯಾಗ್ ಸಿಮೆಂಟ್, ಫೆರೋ ಮಿಶ್ರಲೋಹಗಳು, ಮಿಶ್ರಲೋಹ ಕಾರ್ಬನ್ ಮತ್ತು ಮೈಲ್ಡ್ ಸ್ಟೀಲ್ ರೌಂಡ್‌ಗಳು ಮತ್ತು ಬಿಲ್ಲೆಟ್‌ಗಳನ್ನು ತಯಾರಿಸುತ್ತದೆ.
ಇದು ಬಾಲಾಜಿ ಶಕ್ತಿ ಬ್ರಾಂಡ್‌ನ ಅಡಿಯಲ್ಲಿ TMT ಬಾರ್‌ಗಳನ್ನು (ಥರ್ಮೋ ಮೆಕ್ಯಾನಿಕಲಿ ಟ್ರೀಟೆಡ್ ಬಾರ್) ಮಾರಾಟ ಮಾಡುತ್ತದೆ.
ಕಂಪನಿಯು ತನ್ನ ಸರಕುಗಳನ್ನು ಅಂತಾರಾಷ್ಟ್ರೀಯವಾಗಿಯೂ ರವಾನಿಸುತ್ತದೆ. ಜೈ ಬಾಲಾಜಿ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು 1999 ರಲ್ಲಿ ಸ್ಥಾಪಿಸಲಾಗಿದೆ. ಭಾರತದ ಕೋಲ್ಕತ್ತಾದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಇದು ಹೊಂದಿದೆ.

400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 14 =
Remember me
