ನವದೆಹಲಿ:ಪ್ರೀತಿ ಎಂಬುದು ಧರ್ಮ, ಭಾಷೆ, ಜಾತಿ ಹಾಗೂ ವಯಸ್ಸಿನ ಅಂತರವನ್ನು ಮೀರಿದ್ದಾಗಿದೆ. ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸ ಇರುವ ಸಾಕಷ್ಟು ಜೋಡಿಯ ಮದುವೆಯನ್ನು ನಾವು ನೋಡಿದ್ದೇವೆ. ಇಂತಹ ಮದುವೆಯನ್ನು ಸಮಾಜ ನೋಡುವ ರೀತಿ ಬೇರೆಯಾದರೂ ಕೂಡ ಅಂತಿಮವಾಗಿ ಅವರವರ ಇಚ್ಛೆಗೆ ಬಿಡಲಾಗುತ್ತಿದೆ. ಇಲ್ಲಿ ಮದುವೆಯಾಗುವ ಜೋಡಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆದರೆ, ಇಂತಹ ಮದುವೆಗಳು ವಿನೋದಮಯ ಮೀಮ್ಸ್​ಗಳಿಗಂತೂ ಆಹಾರವಾಗುವುದರಲ್ಲಿ ಎರಡು ಮಾತಿಲ್ಲ.
ಇದೀಗ ಇದೇ ರೀತಿಯ ಮದುವೆಗೆ ಸಂಬಂಧಿಸಿದ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಯಸ್ಸಿನಲ್ಲಿ ತಂದೆ-ಮಗಳ ಸಮಾನವಾಗಿರುವ ಜೋಡಿ ಮದುವೆ ಆಗಿದ್ದು, ವಿಡಿಯೋ ನೆಟ್ಟಿಗರ ಟ್ರೋಲ್​ಗೆ ಗುರಿಯಾಗಿದೆ.
ಇದನ್ನೂ ಓದಿ:ರ‍್ಯಾಗಿಂಗ್​ಗೆ ವೈದ್ಯಕೀಯ ವಿದ್ಯಾರ್ಥಿನಿ ಬಲಿ: ವಾಟ್ಸ್​ಆ್ಯಪ್​ ಚಾಟ್​ನಿಂದ ಸಿಕ್ಕಿಬಿದ್ದ ಸೀನಿಯರ್​ ಸ್ಟೂಡೆಂಟ್​
ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿ ಮತ್ತು ಹರೆಯದ ಯುವತಿ ಕ್ಯಾಮೆರಾಗೆ ಪೋಸ್​ ನೀಡುತ್ತಿರುವ ದೃಶ್ಯವಿದೆ. ಇಬ್ಬರು ಪರಸ್ಪರ ಹಾರವನ್ನು ಕೊರಳಿಗೆ ಹಾಕುವುದು ಮತ್ತು ಒಬ್ಬರಿಗೊಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಚ್ಚರಿ ಏನೆಂದರೆ, ಈ ರೀತಿಯ ಕೆಲವೊಂದು ಮದುವೆಯಲ್ಲಿ ವಧು ಸಪ್ಪೆ ಮೋರೆ ಹಾಕಿಕೊಂಡಿರುವುದನ್ನು ಕಾಣಬಹುದು. ಆದರೆ, ಇಲ್ಲಿ ವಧು ತುಂಬಾ ಸಂತೋಷವಾಗಿದ್ದು, ನಗುತ್ತಲೇ ಕ್ಯಾಮೆರಾಗೆ ಪೋಸ್​ ನೀಡಿದ್ದಾಳೆ.

A post shared by Shekhar Shekhark (@89.70043016)

ಈ ಮದುವೆ ಎಲ್ಲಿ? ಯಾವಾಗ? ನಡೆಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ‘89.70043016’ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್​ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಎಲ್ಲ ಹುಡುಗಿಯರು ಸರ್ಕಾರಿ ಕೆಲ್ಸಕ್ಕೆ ಆಸೆ ಪಟ್ಟರೆ ಅಲ್ಲೊಬ್ಬಳು ಪಿಂಚಿಣಿಗೆ ಆಸೆ ಪಟ್ಟಿದ್ದಳು ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದರೆ, ಮತ್ತೊರ್ವ ವಿಡಿಯೋ ನೋಡೋಕೆ ಆಗ್ತಿಲ್ಲ ಯಾರಾದ್ರೂ ಎಗ್​ ರೈಸ್​ನಲ್ಲಿ ಸ್ವಲ್ಪ ವಿಷ ಹಾಕಿ ಕೊಡ್ರೋ ಎಂದಿದ್ದಾರೆ. ಇದು ದುಡ್ಡಿನ ಮಹಿಮೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ ಸಂಚಾರಕ್ಕೆ ಟೋಲ್ ಸಂಗ್ರಹ; ಇಲ್ಲಿದೆ​ ದರ ಪಟ್ಟಿ…
ವಿಡಿಯೋ ಅಧಿಕೃತತೆ ಬಗ್ಗೆ ಸಂದೇಹವಿದೆ. ನಿಜವಾಗಿಯೂ ಮದುವೆ ಆಗಿದ್ದಾರಾ? ವಿಡಿಯೋ ಹಿನ್ನೆಲೆ ಏನು ಎಂಬ ಸ್ಪಷ್ಟತೆ ಇಲ್ಲ. ಆದರೆ, ವಿಡಿಯೋ ನೋಡಿದವರು ಮಾತ್ರ ಇಬ್ಬರು ಮದುವೆ ಆಗಿದ್ದಾರೆ ಎಂದೇ ಭಾವಿಸಿದ್ದಾರೆ. ವಿಡಿಯೋ ನೋಡಲು ಸಹ ಅದೇ ರೀತಿ ಇದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
