ಎರ್ನಾಕುಲಂ:ಪ್ರಿಯಕರನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವ ದಂತ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಮುವಟ್ಟುಪುಜದಲ್ಲಿ ಭಾನುವಾರ ನಡೆದಿದೆ.
ಡಾ. ಸೋನಾ (30) ಮೃತ ವೈದ್ಯೆ. ತ್ರಿಸ್ಸೂರ್​ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೆಪ್ಟೆಂಬರ್​ 28ರಂದು ಪ್ರಿಯಕರ ಮಹೇಶ್​ ಎಂಬಾತನಿಂದ ಸೋನಾ ಚಾಕು ಇರಿತಕ್ಕೆ ಒಳಗಾಗಿದ್ದರು. ಆರೋಪಿ ಮಹೇಶ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.
ಸೋನಾ ಒಂದೂವರೆ ವರ್ಷದಿಂದ ತ್ರಿಸ್ಸೂರ್​ನ ಒಲ್ಲೂರು ಬಳಿಯ ಕುಟ್ಟನೆಲ್ಲೂರಿನಲ್ಲಿ ಡೆಂಟಲ್​ ಕ್ಲಿನಿಕ್​ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್​ರೊಂದಿಗೆ ಲಿವ್ ಇನ್ ರಿಲೇಷನ್​ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಮಹೇಶ್​ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ.
ಹೀಗಿರುವಾಗ ಹಣಕಾಸು ವಿಚಾರವಾಗಿ ಇತ್ತೀಚೆಗಷ್ಟೇ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದರ ನಡುವೆ ಸೋನಾ ಕಳೆದ ವಾರ ಮಹೇಶ್​ ವಿರುದ್ಧ ಒಲ್ಲೂರ್​ ಪೊಲೀಸ್​ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಿದ್ದರು. ಕ್ಲಿನಿಕ್​ನಿಂದ ಬರುತ್ತಿದ್ದ ಆದಾಯವನ್ನು ಅಕ್ರಮವಾಗಿ ತೆಗೆದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ:ಇಎಂಐ ಕಟ್ಟಿದವರಿಗೆ ಕ್ಯಾಷ್​ಬ್ಯಾಕ್? : ಮಾರಟೋರಿಯಂ ಪಡೆಯದವರಿಗೂ ಸಿಗಲಿದೆ ಕೇಂದ್ರದ ಸವಲತ್ತು
ದೂರಿನ ಅನ್ವಯ ಪೊಲೀಸರು ಇಬ್ಬರಿಗೂ ಸಮನ್ಸ್​ ನೀಡಿದ್ದರು. ಆದರೆ, ಮಹೇಶ್​ ಪೊಲೀಸರ ಎದುರು ಹಾಜರಾಗಿರಲಿಲ್ಲ. ಹೀಗಿರುವಾಗ ಸೆ. 28ರಂದು ಕ್ಲೀನಿಕ್​ನಲ್ಲಿ ಸೋನಾ ತಂದೆ ಜೋಸ್​ ಸಮ್ಮುಖದಲ್ಲಿ ಸಂಧಾನ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಹೇಶ್​, ಸೋನಾರನ್ನು ಬಲವಂತವಾಗಿ ಕ್ಲಿನಿಕ್​ನ ಲ್ಯಾಬ್​ ಒಳಗಡೆ ಎಳೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆಯ ಹೊಟ್ಟೆಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಶರಣಾಗಲು ಪೊಲೀಸ್​ ಠಾಣೆಗೆ ಹೋಗುತ್ತೇನೆಂದು ಹೇಳಿ ಮಹೇಶ್​ ಪರಾರಿಯಾಗಿದ್ದಾನೆ.
ಇನ್ನು ಸೋನಾಗೆ ಮೊದಲೇ ಮದುವೆಯಾಗಿ ಪತಿಯಿಂದ ಬೇರೆಯಾಗಿದ್ದಳು. ಒಂದು ಮಗುವೂ ಸಹ ಇದೆ. ಇನ್ನು ಪ್ರಿಯಕರ ಮಹೇಶ್​ ಅವಿವಾಹಿತನಾಗಿದ್ದು, ಪವರಟ್ಟಿ ಮೂಲದವನು. ಸದ್ಯ ಸೋನಾ ಜೀವನ ದುರಂತ ಅಂತ್ಯ ಕಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ತವರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.(ಏಜೆನ್ಸೀಸ್​)
ಕಾಲುವೆಯಲ್ಲಿ ನೀರು ಕುಡಿಯಲು ಹೋದ ಯುವಕರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seventeen =
Remember me
