ಕೇರಳ:ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಯುವವೈದ್ಯೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕೇರಳದ ಕೊಟ್ಟಾರಕ್ಕರಾದಲ್ಲಿ ನಡೆದಿದೆ. ಈ ಘಟನೆಯು ಕೊಟ್ಟಾರಕ್ಕರಾ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.
ಸಂತ್ರಸ್ತೆಯನ್ನು ಡಾ|| ವಂದನಾ ದಾಸ್ ಎಂದು ಗುರುತಿಸಲಾಗಿದ್ದು, ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದ ಆರೋಪಿ ಸಂದೀಪ್​ ಎಂಬಾತ ಚಿಕಿತ್ಸೆ ವೇಳೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾನೆ. ಶಾಲಾ ಶಿಕ್ಷಕನಾಗಿದ್ದ ಸಂದೀಪ್​ ಆಸ್ಪತ್ರೆಗೆ ಕರೆತರುವ ಮುಂಚೆ ನೆರೆಹೊರೆಯವರೊಂದಿಗೆ ನಡೆದ ಜಗಳದಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ. ಅನಂತರ ಈತನ ವಿರುದ್ಧ ದೂರು ಸಹ ದಾಖಲಾಗಿತ್ತು.
ಇದನ್ನೂ ಓದಿ:ಅಬ್ಬಬ್ಬಾ…! ಬ್ರೇಕಪ್ ಆದ ನಂತರ ಮಾಜಿ ಗರ್ಲ್‌ಫ್ರೆಂಡ್ ಬಳಿ ಯುವಕ ಕೇಳಿದ್ದೇನು?
ಈ ಹಿನ್ನೆಲೆಯಲ್ಲಿ ಪೊಲೀಸರು ಮದ್ಯಪಾನ ಮಾಡಿದ್ದ ಈತನನ್ನು, ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗೆಂದು ಕರೆತಂದಿದ್ದರು. ಈ ವೇಳೆ ಗಾಯಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಅಲ್ಲಿಯೇ ಇದ್ದ ಕತ್ತರಿ ತೆಗೆದುಕೊಂಡ ಸಂದೀಪ್​ ವೈದ್ಯೆ ಸೇರಿದಂತೆ ಸೆಕ್ಯೂರಿಟಿ ಗಾರ್ಡ್​ ಮತ್ತು ಒಬ್ಬ ಪೊಲೀಸ್​ ಅಧಿಕಾರಿಗೆ ಇರಿದಿದ್ದಾನೆ. ನಂತರ ಆತನನ್ನು ತೀವ್ರ ಹರಸಾಹಸ ಪಟ್ಟು ಬಂಧಿಸಲಾಯಿತುತೀವ್ರ ಗಾಯಗೊಂಡಿದ್ದ ವೈದ್ಯೆಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾದರೂ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ವೈದ್ಯರ ಸಂಘಟನೆ ಈ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದು, ಆರೋಪಿ ಹಾಗೂ ಅಪರಾಧಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೋಳ ತೊಡಿಸಬೇಕು ಆದೇಶವಿದ್ದರೂ ಅವನಿಗೆ ಕೋಳ ಹಾಕಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
