ಕೊಯಿಕ್ಕೋಡ್:ಯುವ ವೈದ್ಯೆಯೊಬ್ಬಳು ಸ್ನೇಹಿತೆಯ ಅಪಾರ್ಟ್​ಮೆಂಟ್​ ಫ್ಲ್ಯಾಟ್​ನಲ್ಲಿ ಬುಧವಾರ (ಮಾ.01) ಬೆಳಗ್ಗೆ 10 ಗಂಟೆ ಸುಮಾರಿಗೆ ನಿಗೂಢವಾಗಿ ಮೃತಪಟ್ಟಿದ್ದಾಳೆ.
ಮೃತಳನ್ನು ಥಾನ್ಸಿಯಾ (25) ಎಂದು ಗುರುತಿಸಲಾಗಿದೆ. ಈಕೆ ಕೊಯಿಕ್ಕೋಡ್‌ನ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು. ಥಾನ್ಸಿಯಾ ವಯನಾಡಿನ ಕಣಿಯಂಪಟ್ಟದ ನಿವಾಸಿ. ಬುಧವಾರ ಬೆಳಗ್ಗೆ 10 ಗಂಟೆಗೆ ಕೊಯಿಕ್ಕೋಡ್​ನ ಪಲಹಿಯಲ್ಲಿರುವ ಫ್ಲ್ಯಾಟ್​ನಲ್ಲಿ ಶವವಾಗಿ ಪತ್ತೆಯಾದಳು.
ಇದನ್ನೂ ಓದಿ:ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: FIR ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ ಯುವಕ
ನಿನ್ನೆ (ಮಾ.01) ಥಾನ್ಸಿಯಾ ತನ್ನ ಸ್ನೇಹಿತೆಯ ಫ್ಲಾಟ್‌ಗೆ ಬಂದಿದ್ದಳು. ಇಂದು ಬೆಳಗ್ಗೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕೊಠಡಿ ತೆರೆದು ನೋಡಿದಾಗ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಸ್ನೇಹಿತೆ​ ಕೂಡ ಡಾಕ್ಟರ್​. ಮೃತ ಥಾನ್ಸಿಯಾಗೆ ಮದುವೆಯಾಗಿದ್ದು, ಆಕೆಯ ಗಂಡನ ಹೆಸರು ಪರೀತ್ ಎಂದು. ಇತ್ತೀಚೆಗಷ್ಟೇ ಮದುವೆ ಆಗಿದ್ದಳು.
ಮೃತದೇಹವನ್ನು ಪೊಲೀಸರು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಹೆಚ್ಚಿನ ಪರೀಕ್ಷೆಯ ನಂತರ ಸಾವಿನ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಸ್ಮಾರಕ್ಕೆ ತನ್ಸಿಯಾ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಮೊಬೈಲ್-ಚಾರ್ಜರ್ ಒಂದೇ ಬಾಕ್ಸ್​ನಲ್ಲಿದ್ರೆ ಪ್ರತ್ಯೇಕ ತೆರಿಗೆ ಇಲ್ಲ: ಹೈಕೋರ್ಟ್​ ಆದೇಶ

ಈ ಒಂದು ಕಾರಣಕ್ಕೆ ನಟ ಶಾರುಖ್​ ಖಾನ್​ ಮಹಿಳಾ ಬಾಡಿಗಾರ್ಡ್ಸ್​ ಹೊಂದಿದ್ದಾರಂತೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eighteen − three =
Remember me
