– ಪೂರ್ತಿ ಚಾರ್ಜ್ ಮಾಡಿದರೆ..ನಾಲ್ಕು ಗಂಟೆ ಕೆಲಸ ಮಾಡುತ್ತೆ ಈ ಟ್ರ್ಯಾಕ್ಟರ್
ತೆಲಂಗಾಣ:ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಕೃಷಿ ಸಂಪೂರ್ಣವಾಗಿ ತಾಂತ್ರಿಕವಾಗಿದೆ. ಟ್ರ್ಯಾಕ್ಟರ್‌ಗಳ ಆಧಾರದ ಮೇಲೆ ಕೃಷಿ ನಡೆಯುತ್ತಿದೆ. ಆದರೆ ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಟ್ರ್ಯಾಕ್ಟರ್‌ ಬಳಕೆ ಮಾಡುವುದು ಕಷ್ಟವಾಗುತ್ತಿದೆ. ಯುವ ಇಂಜಿನಿಯರ್ ಒಬ್ಬರು ಡೀಸೆಲ್ ಟ್ರ್ಯಾಕ್ಟರ್ ಬದಲು…ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ತಯಾರಿಸಿ ತನ್ನ ಅದ್ಭುತ ಪ್ರತಿಭೆ ತೋರಿದ್ದಾರೆ.
ಇದನ್ನೂ ಓದಿ:ಇಂದಿರಾ ಗಾಂಧಿ ನಂತರ 40 ವರ್ಷಗಳ ಬಳಿಕ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ
ಪೆದ್ದಪಲ್ಲಿ ಜಿಲ್ಲೆಯ ನಗರಂ ಗ್ರಾಮದ ಮಂಥನಿ ಮಂಡಲದ ಮೂಲ್ ಶಶಿರತ್ ರೆಡ್ಡಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ಇವರ ತಂದೆ ಕೃಷಿ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಟ್ರಾಕ್ಟರ್ ಆಧಾರದ ಮೇಲೆ ಕೃಷಿ ನಡೆಯುತ್ತದೆ. ಟ್ರ್ಯಾಕ್ಟರ್‌ಗೆ ವೆಚ್ಚವಾಗುತ್ತದೆ ಹೀಗಾಗಿ ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ತಯಾರಿಸುವ ಚಿಂತನೆ ನಡೆಸಿದ್ದರು. ಮೂಲ್ ಶಶಿರತ್ ರೆಡ್ಡಿ ಅವರ ಈ ಹೊಸ ಕಾರ್ಯಕ್ಕೆ ಅವರ ತಂದೆಯೂ ಸಹಕರಿಸಿದ್ದಾರೆ.
ಇದನ್ನೂ ಓದಿ:WWE ಕುಸ್ತಿಪಟು ಬ್ರೇ ವ್ಯಾಟ್ ಹೃದಯಾಘಾತದಿಂದ ನಿಧನ
ಈ ಟ್ರ್ಯಾಕ್ಟರ್ ತಯಾರಿಕೆಗೆ ನಾಲ್ಕು ಲಕ್ಷ ಖರ್ಚು ಮಾಡಲಾಗಿದೆ. ಟ್ರ್ಯಾಕ್ಟರ್​ನಲ್ಲಿ, 32 ಸಣ್ಣ ಲಿಥಿಯಂ ಫಾಸ್ಫೇಟ್ ಬ್ಯಾಟರಿಗಳು, ಸ್ಮಾರ್ಟ್ ಕಂಟ್ರೋಲರ್, 20 ಎಚ್ ಪಿ ಮೋಟಾರ್ ಫಿಕ್ಸ್ ಮಾಡಲಾಗಿದೆ. ಒಮ್ಮೆ ಬ್ಯಾಟರಿಯನ್ನು ಹಾಕಿದರೆ 12 ವರ್ಷಗಳವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಟ್ರಾಕ್ಟರ್ 4 ಗಂಟೆಗಳ ಕಾಲ ಚಲಿಸುತ್ತದೆ. ನಾಲ್ಕು ಗುಂಟೆಯಲ್ಲಿ ನಾಲ್ಕು ಎಕರೆ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗುತ್ತದೆ. ಈ ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡಿದರೆ ಕೇವಲ 150 ರೂ. ಎಕರೆಗೆ ಖರ್ಚಾಗಬಹುದು ಎನ್ನಲಾಗಿದೆ. ಈ ಟ್ರ್ಯಾಕ್ಟರ್ ನೋಡಲು ರೈತರು ಬರುತ್ತಿದ್ದಾರೆ.
ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದಂದು ಗುಡ್​​ ನ್ಯೂಸ್​​ ಕೊಟ್ಟ ಧ್ರುವ; 2ನೇ ಮಗುವಿನ ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ…
ಶಶಿರಥರೆಡ್ಡಿ ಇದೇ ರೀತಿಯ ಟ್ರ್ಯಾಕ್ಟರ್​​ಗಳನ್ನು ತಯಾರಿಸಲು ಮುಂದಾಗಿದ್ದಾರೆ. ಆದರೆ ಸರಕಾರದಿಂದ ಅನುಮತಿ ಪಡೆಯಬೇಕು. ಈ ಟ್ರ್ಯಾಕ್ಟರ್​​ನ್ನು ಅಧಿಕಾರಿಗಳು ಈಗಾಗಲೇ ನೋಡಿದ್ದಾರೆ. ಈ ಯುವ ಇಂಜಿನಿಯರ್​ಗೆ ಆಗಸ್ಟ್ 15ರಂದು ಪೆದ್ದಪಲ್ಲಿ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿದರು.
ಇದನ್ನೂ ಓದಿ:ಅತಿಥಿ ಉಪನ್ಯಾಸಕ ನೇಮಕಾತಿಗೆ ಮೀಸಲಾತಿ ಅನ್ವಯಿಸಿ; ಸಿಎಂಗೆ ಪತ್ರ ಬರೆದ ಎಂಎಲ್‌ಸಿ ಡಾ.ಸಾಬಣ್ಣ
ಇಂತಹ ಟ್ರ್ಯಾಕ್ಟರ್​​ಗಳನ್ನು ಸಾಗುವಳಿಗೆ ಬಳಸಿದರೆ ರೈತರಿಗೆ ಬಂಡವಾಳ ಕಡಿಮೆಯಾಗಿ ಗಣನೀಯ ಲಾಭವಾಗುತ್ತದೆ. ಇಂತಹ ಯುವ ಇಂಜಿನಿಯರ್​​ಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕೆಂದು ರೈತರು ಹೇಳಿದ್ದಾರೆ.
ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರ; ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
