ವಿಜಯವಾಡ:ಮನೆಯೊಂದರಲ್ಲಿ ನಡೆಯುತ್ತಿದ್ದ ಶುಭ ಕಾರ್ಯಕ್ರಮ ನಿಮಿತ್ತ ಮೆಹಂದಿ ಹಾಕಲು ಫ್ರೆಂಡ್ಸ್​ ಜತೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಯುವತಿ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮೃತ ಯುವತಿಯನ್ನು ಎಲ್ಲೆ ರತ್ನಮಾಲಾ (19) ಎಂದು ಗುರುತಿಸಲಾಗಿದೆ. ಈಕೆ ಆಂಧ್ರದ ಕೋನಾಸೀಮ ಜಿಲ್ಲೆ ಅತ್ರೇಯಪುರಂ ಮಂಡಲದ ಪೆರಾವರಮ್​ ಗ್ರಾಮದ ನಿವಾಸಿ. ರಾಜಮಹೇಂದ್ರವರಂ ಮೂಲದ ಆಕೆಯ ಸ್ನೇಹಿತೆ ಸುಧಾರಾಣಿಗೆ ಎಡಗೈಗೆ ಗಾಯವಾಗಿದ್ದರೆ, ಅಲಮುರು ಮಂಡಲದ ಮೊಡುಕುರು ಗ್ರಾಮದ ಸ್ನೇಹಿತ ಕಾತೌಂಗ ಕಾಶಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೆಹಂದಿ ಹಾಕಿ ಬರಲು ಶುಕ್ರವಾರ ರಾಜಮಹೇಂದ್ರವರಂನಿಂದ ಅಮಲಾಪುರಂಗೆ ರತ್ನಮಾಲಾ ಮತ್ತು ಸುಧಾರಾಣಿ ತೆರಳಿದ್ದರು. ಕಾಶಿ ಬೈಕ್​ ಚಲಾಯಿಸುತ್ತಿದ್ದ. ಮೂವರು ರಾವುಲಪಾಳ್ಯಂನ ಸೇತುವೆ ಬಳಿ ಹೋಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡಿದಿದೆ. ಈ ವೇಳೆ ಬೈಕ್​ ಸಮತೇ ಕೆಳಗೆ ಬಿದ್ದ ರತ್ನಮಾಲಾ ತಲೆಯ ಮೇಲೆ ಲಾರಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸುಧಾರಾಣಿ ಹಾಗೂ ಕಾಶಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ರತ್ನಮಾಲಾ ಮೃತದೇಹವನ್ನು ಕೊತ್ತಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಎಸಗಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ರತ್ನಮಾಲಾ ವೀರರಾಜು ಮತ್ತು ನಾಗಮಣಿ ದಂಪತಿಯ ಎರಡನೇ ಮಗಳು. ಮೊದಲು ಮಗಳಿಗೆ ಮದುವೆಯಾಗಿದೆ. ತಂದೆ ವೀರರಾಜು ಕೂಲಿ ಕಾರ್ಮಿಕನಾಗಿದ್ದಾನೆ. ತಾಯಿ ನಾಗಮಣಿ ಮೂರು ತಿಂಗಳ ಹಿಂದಷ್ಟೇ ಕೆಲಸಕ್ಕೆಂದು ದುಬೈಗೆ ತೆರಳಿದಳು. ರತ್ನಮಾಲಾ ಶುಭ ಸಮಾರಂಭಗಳಿಗೆ ಮೆಹಂದಿ ಮತ್ತು ಮೇಕಪ್ ಹಾಕುವ ಕೆಲಸ ಮಾಡುತ್ತಾ ಮನೆಗೆ ನೆರವಾಗುತ್ತಿದ್ದಳು. ಆದರೆ, ಇದೀಗ ಅಪಘಾತದಲ್ಲಿ ಮಗಳು ಮೃತಪಟ್ಟಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.(ಏಜೆನ್ಸೀಸ್​)​
ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರೋ ಆನೆಗಳ ಸಂಖ್ಯೆ ಪತ್ತೆಹಚ್ಚುವಲ್ಲಿ ಶೇ.95 ಮಂದಿ ಫೇಲ್​! ನೀವು ಪತ್ತೆ ಹಚ್ಚುವಿರಾ?

ಚಿಂತಾಮಣಿಯ ಕಲ್ಯಾಣ ಮಂಟಪ ಬಳಿ ಸಿಕ್ಕ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಾಚ್​ಮನ್​!

ಈ ಹೋಟೆಲಿನಲ್ಲಿ ಜ್ವಾಲಾಮುಖಿಯೇ ಒಲೆ; ಅಡುಗೆ ಮನೆಯನ್ನು ಕಟ್ಟಿದ್ದೇ ರೋಚಕ ಕಥೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + six =
Remember me
