ಲಖನೌ:ರಾಷ್ಟ್ರಮಟ್ಟದ ಖೋಖೋ ಆಟಗಾರ್ತಿಯಾಗಿದ್ದ 24 ವರ್ಷ ವಯಸ್ಸಿನ ಯುವತಿಯೊಬ್ಬಳು ರೈಲ್ವೇ ನಿಲ್ದಾಣದ ಬಳಿ ಕೊನೆ ಉಸಿರೆಳೆಯುತ್ತಾ ಪತ್ತೆಯಾಗಿರುವ ಪ್ರಕರಣ ಉತ್ತರಪ್ರದೇಶದ ಬಿಜನೋರ್​ನಲ್ಲಿ ನಡೆದಿದೆ. ಬರುವ ನವೆಂಬರ್​ನಲ್ಲಿ ಆಕೆಯ ಮದುವೆ ನಿಗದಿಯಾಗಿದ್ದು, ಹಸೆಮಣೆ ಏರಬೇಕಿದ್ದ ಯುವತಿ ಮಸಣದ ಪಾಲಾಗಿದ್ದಾಳೆ. ಮೃತಳ ಮೇಲೆ ಲೈಂಗಿಕ ಅತ್ಯಾಚಾರ ಕೂಡ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬಿಜ್​ನೋರ್​ನ ಕುಟಿಯಾ ಕಾಲೋನಿ ನಿವಾಸಿಯಾಗಿದ್ದ ಯುವತಿಯು, 2016 ರ ರಾಷ್ಟ್ರ ಮಟ್ಟದ ಖೋಖೋ ಚ್ಯಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದಲ್ಲದೆ ಇಂಟರ್​ಕಾಲೇಜು ಮಟ್ಟದ ಆಟಗಾರ್ತಿಯಾಗಿದ್ದಳು. ಸೆಪ್ಟೆಂಬರ್ 10 ರ ಬೆಳಿಗ್ಗೆ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಸಲ್ಲಿಸಲು ತೆರಳಿದ್ದಳು. ತಡವಾದರೂ ಹಿಂತಿರುಗದಿದ್ದ ಅವಳ ಫೋನ್​ ಸ್ವಿಚ್ಡ್​ ಆಫ್​ ಬರುತ್ತಿತ್ತು. ನೆರೆಯ ಮಹಿಳೆಯೊಬ್ಬರು ಬಿಜನೋರ್​ ರೈಲ್ವೆ ನಿಲ್ದಾಣದ ರೈಲ್ವೇ ಸ್ಲೀಪರ್​​ಗಳ ಹತ್ತಿರ ಹಾದುಹೋಗುವಾಗ ಯುವತಿಯು ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನ್ನು ನೋಡಿದರು. ಅವಳ ಕುತ್ತಿಗೆಗೆ ದುಪಟ್ಟಾ ಬಿಗಿಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದು, ಪೊಲೀಸರಿಗೆ ವಿಷಯ ತಿಳಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ:ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು
ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಕೆ ಸಾವಪ್ಪಿದ್ದು, ಪ್ರಾಥಮಿಕ ಪರೀಕ್ಷೆ ನಡೆಸಿದ ವೈದ್ಯರು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಹೇಳಿದ್ದಾರೆ. ಕೊಲೆಗೆ ಮುಂಚೆ ರೇಪ್​ ಕೂಡ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಸೋಂಕು ದೃಢಪಟ್ಟ 30 ದಿನಗಳಲ್ಲಿ ಸತ್ತಿದ್ದರೆ, ಅದು ಕರೊನಾ​​ ಸಾವು; ಪ್ರಮಾಣಪತ್ರ ಪಡೆಯಲು ಹೀಗಿವೆ, ಮಾರ್ಗಸೂಚಿಗಳು

ಗುಜರಾತ್​: ರೂಪಾನಿ ರಾಜೀನಾಮೆ; ಮುಂದಿನ ಸಿಎಂ ಯಾರು?

ತಾರಾಸಂಗಮ: ರಣವೀರ್​, ದೀಪಿಕಾ ಜೊತೆ ಪಿ.ವಿ.ಸಿಂಧು ಡಿನ್ನರ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
