ನವದೆಹಲಿ:ಯಾವುದೇ ಸಂಬಂಧದಲ್ಲಿ ಪ್ರಮುಖವಾದ ವಿಷಯವೇನೆಂದರೆ ಅದು ನಂಬಿಕೆ. ನಂಬಿಕೆ ಅನ್ನೋ ಒಂದು ಅಂಶ ಇಲ್ಲದಿದ್ದರೆ ಪ್ರತಿಯೊಂದು ಸಂಬಂಧವು ಹಾಳಾಗುತ್ತದೆ. ಹೀಗಾಗಿ ಆರೋಗ್ಯಕರ ವೈವಾಹಿಕ ಜೀವನ ಬಹುಮುಖ್ಯವಾದ ಅಂಶವೆಂದರೆ ಅದು ನಂಬಿಕೆ ಮಾತ್ರ.
ಯಾವಾಗ ನಂಬಿಕೆ ಕೆಡುತ್ತದೆ ಅಂದರೆ ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ವಿವಾಹೇತರ ಸಂಬಂಧ ಹೊಂದಿದಾಗ. ಬಹುತೇಕ ಮದುವೆ ಸಂಬಂಧಗಳು ಮುರಿದು ಬೀಳಲು ಈ ಅನೈತಿಕ ಸಂಬಂಧಗಳೇ ಮೂಲ ಕಾರಣ. ಇದೀಗ ಮಹಿಳೆಯೊಬ್ಬಳು ತನಗೆ ನಂಬಿಕೆ ದ್ರೋಹ ಮಾಡಿದ ಗಂಡನನ್ನು ಹಿಡಿದು ಥಳಿಸಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ! ನಂತರ ನಡೆದಿದ್ದು ಮತ್ತೊಂದು ಎಡವಟ್ಟು
ಪತಿಯ ಕುತ್ತಿಗೆಗೆ ಕೈಹಾಕಿ ಎಳೆದಾಡಿ ಥಳಿಸಿರುವ ದೃಶ್ಯ ವಿಡಿಯೋದಲ್ಲಿದೆ. ಮಹಿಳೆ ಥಳಿಸುವುದನ್ನು ದಾರಿಹೋಕರು ನೋಡಿ ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮದುವೆಯಾದ ನಂತರ ಆತನ ಜೊತೆ ಅನುಭವಿಸಿದ ನೋವನ್ನು ಹೇಳಿಕೊಳ್ಳುತ್ತಾ ಪತಿಗೆ ಗೂಸಾ ನೀಡಿದ್ದಾಳೆ.
ಅರ್ಹಂತ್ ಶೆಲ್ಬಿ ಎಂಬುವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈಗಾಗಲೇ 64 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಭಾರೀ ರಿಟ್ವೀಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗಿದೆ. ಈ ಘಟನೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದರೂ, ಅನೇಕರು ಮಹಿಳೆಯ ಪರವಾಗಿ ನಿಂತಿದ್ದಾರೆ. ಆದರೆ, ವಿಡಿಯೋ ಎಲ್ಲಿಯದ್ದು? ಯಾವಾಗ ಘಟನೆ ನಡೆಯಿತು? ಎಂಬುದರ ವಿವರಣೆ ಇಲ್ಲ. ಆದರೆ, ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
@gharkekaleshpic.twitter.com/p4ottAZymg
— Arhant Shelby (@Arhantt_pvt)February 26, 2023

ವಾಂಖೆಡೆಯಲ್ಲಿ ಸಚಿನ ತೆಂಡುಲ್ಕರ್ ದೇಹಗಾತ್ರದ ಪ್ರತಿಮೆ ಸ್ಥಾಪನೆ

ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್​ನಲ್ಲಿ 18 ವರ್ಷಕ್ಕೆ ಮದುವೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − ten =
Remember me
