ಬಾರ್ಮರ್:ಜಲೋರ್ ಜಿಲ್ಲೆಯ ಪದರ್ಡಿ ಗ್ರಾಮದಲ್ಲಿ 23 ವರ್ಷದ ವ್ಯಕ್ತಿಯೊಬ್ಬನನ್ನು ಆತನ ನೆರೆಹೊರೆಯವರು ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯನ್ನು ಕೆಲವು ನಿಮಿಷಗಳ ಕಾಲ ಕೈಯಲ್ಲಿ ಹಿಡಿದು ರಸ್ತೆಬದಿಯಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ಸಂಜೆ ಗ್ರಾಮಸ್ಥರು ಭೀಕರ ಹತ್ಯೆಯನ್ನು ಪ್ರತಿಭಟಿಸಿದ ನಂತರ ಶಂಕ್ಲಾರಾಮ್ ಭೀಲ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡ ನಂತರವೇ ಶವ ಪರೀಕ್ಷೆಗೆ ಸ್ಥಳದಿಂದ ಶವವನ್ನು ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶ ಮಾಡಿಕೊಟ್ಟರು.
ಜಾಲೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮೇಶ್ವರಲಾಲ್ ಮೇಘ್ವಾಲ್ ಹತ್ಯೆಯನ್ನು ದೃಢಪಡಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಮಾರಕಾಸ್ತ್ರ, ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೊಲೆಯ ಉದ್ದೇಶದ ಬಗ್ಗೆ ಮಾತನಾಡಲು ಪೊಲೀಸರು ನಿರಾಕರಿಸಿದ್ದು, ಅದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇಬ್ಬರ ನಡುವಿನ ವೈಯುಕ್ತಿಕ ದ್ವೇಷವೂ ಕಾರಣವಾಗಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಆದರೆ ಅದನ್ನು ಧೃಢಪಡಿಸಿಲ್ಲ.
ಈ ಪ್ರದೇಶದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಸಹ ವಿಧಿಸಲಾಗಿದ್ದು ಪ್ರದೇಶದಲ್ಲಿ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಇಂಟರ್ನೆಟ್ ಕಡಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹಾಗೂ ಸಂತ್ರಸ್ತ ಕಿಶೋರ್ ಸಿಂಗ್ ಒಂದೇ ಗ್ರಾಮದವರಾಗಿದ್ದು ಬುಧವಾರ ಸಂಜೆ 6.30ರ ಸುಮಾರಿಗೆ ಕಿಶೋರ್ ಸಿಂಗ್ ವಾಕಿಂಗ್ ಹೊರಟಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಂಕ್ಲಾರಾಮ್ ಭೀಲ್ ಹಿಂದಿನಿಂದ ಆತನ ಬಳಿಗೆ ಬಂದು ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಕಿಶೋರ್​ ಸಿಂಗ್ ಸತ್ತ ನಂತರ, ಆರೋಪಿಗಳು ತಲೆಯೊಂದಿಗೆ ಸುಮಾರು 150 ಮೀಟರ್ ದೂರ ಹೋಗಿ ಎಸೆದಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − five =
Remember me
