ಚಂದ್ವಾರ:ಯುವಕನೊಬ್ಬ 150 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ ಹೈವೋಲ್ವೇಜ್ ಡ್ರಾಮಾ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದ ಚಂದ್ವಾರದಲ್ಲಿ ನಡೆದಿದೆ.
ಇದನ್ನೂ ಓದಿ:ಪೆಟ್ರೋಲ್​ ಬಂಕ್​​ ಸ್ಫೋಟ: ಹಲವು ಮಕ್ಕಳು ಸೇರಿದಂತೆ ಕನಿಷ್ಠ 33 ಸಾವು
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಸ್‌ಡಿಆರ್‌ಎಫ್ ತಂಡದೊಂದಿಗೆ ತಲುಪಿದ್ದು ಆತನನ್ನು ಕೆಳಗಿಳಿಸಲು ಅಧಿಕಾರಗಳು ಹರಸಾಹಸವನ್ನೇ ಪಟ್ಟಿದ್ದಾರೆ.
ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಯುವಕರನ್ನು ಕೆಳಗಿಳಿಸುವಂತೆ ಪದೇ ಪದೇ ಕೇಳಿದರೂ ಆತ ಇಳಿಯಲು ನಿರಾಕರಿಸಿದ್ದು, ನಂತರ ಎಸ್‌ಡಿಆರ್‌ಎಫ್ ಸಿಬ್ಬಂದಿ ಟವರ್ ಹತ್ತಲು ಮುಂದಾಗಿದ್ದಾರೆ. ಆದರೆ ಯಾರಾದರೂ ತನ್ನನ್ನು ಕೆಳಗಿಳಿಸಲು ಹತ್ತಿದರೆ ಟವರ್‌ನಿಂದ ಜಿಗಿಯುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ. ಸೋಮವಾರ ಮಧ್ಯಾಹ್ನವೇ ಟವರ್​ ಹತ್ತಿದ್ದ ಯುವಕ ಸುಮಾರು 10 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳಿಗೆ ತೊಂದರೆ ನೀಡಿದ್ದು, ಕೊನೆಗೆ ಇಂದು ಮುಂಜಾನೆ 3.30 ಸುಮಾರಿಗೆ ಟವರ್‌ನಿಂದ ಕೆಳಗಿಳಿದಿದ್ದಾನೆ.
ಇದನ್ನೂ ಓದಿ:ವಂದೇ ಭಾರತ್​ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ‘ಎಲ್ಲವೂ ತಮಾಷೆಗಾಗಿ’ ಎಂದ ಯುವಕ
ಯುವಕನು ಸ್ಥಳೀಯ ದಾಸನವಾಡದ ಗ್ರಾಮದವನು ಎಂದು ಹೇಳಲಾಗುತ್ತಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಯುವಕ ಟವರ್​ ಹತ್ತಿದ್ದ ಕಾರಣವನ್ನು ಇದುವರೆಗೂ ಯಾವುದೇ ನೀಡಿಲ್ಲ. ಯುವಕ ಡ್ರಗ್ಸ್ ಕೂಡ ಸೇವಿಸಿದ್ದು, ಕುಡಿದ ಅಮಲಿನಲ್ಲಿ ಟವರ್ ಏರಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 3 =
Remember me
