ತಮಿಳುನಾಡು:ಇಲ್ಲೊಬ್ಬ ಯುವಕ, ಹೊಸವರ್ಷದಂದು ಸಂಭ್ರಮಾಚರಣೆಯಲ್ಲಿ ಮದ್ಯಪಾನ ಮಾಡಿದ್ದಾನೆ. ಆತ ಇದೇ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದು. ಆದರೆ ದುರದೃಷ್ಟವಶಾತ್​ ಆತ ಪ್ರಾಣ ಕಳೆದುಕೊಂಡಿದ್ದಾನೆ.
ಮೃತ ಸಂತೋಷ್ ಕುಮಾರ್ (23), ಸೇಲಂನ ಮಲ್ಲೂರು ವೆಂಗಂಪಟ್ಟಿ ಪಟ್ಟಣದ ನಿವಾಸಿಯಾಗಿದ್ದು, ತನ್ನ ಆರು ಮಂದಿ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದ. ಸಂತೋಷ್, ಇಲ್ಲಿಯವರೆಗೆ ಮದ್ಯಪಾನ ಮಾಡಿರಲಿಲ್ಲ. ಈತ ತಂದೆಯೊಂದಿಗೆ ತಮ್ಮ ಊರಿನಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ.
ಮದ್ಯಪಾನ ಮಾಡಿದ ನಂತರ ಸಂತೋಷ್, ಸ್ವಲ್ಪ ಅಸ್ವಸ್ಥನಾಗಿದ್ದಾನೆ. ಈ ಸಂದರ್ಭ ಈತನಿಗೆ ಉಸಿರಾಡಲು ಸ್ವಲ್ಪ ಸಮಸ್ಯೆ ಆಗಿದೆ ಎಂದು ವರದಿಯಾಗಿದೆ. ತಕ್ಷಣ ಆತನ ಸ್ನೇಹಿತರು ಮತ್ತು ಕೆಲವು ಸ್ಥಳೀಯರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ತಲುಪಿದ ಮೇಲೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಕುರಿತು ಯೇರ್ಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೇರ್ಕಾಡು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು “ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಅವನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ. ಹೊಸ ವರ್ಷವನ್ನು ಸ್ನೇಹಿತರೊಂದಿಗೆ ಆಚರಿಸಲು ಬಯಸಿದ ಆತ, ಯೇರ್ಕಾಡು ಬಳಿ ರೆಸಾರ್ಟ್ ಅನ್ನು ಬುಕ್ ಮಾಡಿದ್ದ. ಸಂತೋಷ್‌ ಮದ್ಯ ಸೇವಿಸಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ.
“ಆತ ಮೊದಲು ಆಲ್ಕೊಹಾಲ್ ಸೇವಿಸದ ಕಾರಣ ಅಸ್ವಸ್ಥತೆಯನ್ನು ಅನುಭವಿಸಿ ವಾಂತಿ ಮಾಡಿದ್ದಾನೆ. ಆದರೆ ಅದನ್ನು ಲೆಕ್ಕಿಸದೆ ಅವರು ಕುಡಿಯುತ್ತಿದ್ದರು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡು ಕೊನೆಗೆ ಯುವಕ ಕುಸಿದು ಬಿದ್ದಿದ್ದಾನೆ. ಸಂತೋಷ್​ನ ನಾಡಿಮಿಡಿತ ಕಡಿಮೆಯಾಗಿದ್ದು, ಸ್ನೇಹಿತರು ಅವನನ್ನು ಯೆರ್ಕಾಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನೋಡಿದಾಗ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಘಟನೆ ರಾತ್ರಿ 11-11:30 ರ ಸುಮಾರಿಗೆ ನಡೆದಿರಬಹುದು’ ಎಂದು ಮಾಹಿತಿ ನೀಡಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
