ಚಿತ್ತೂರು:ಇತ್ತೀಚಿಗೆ ದೇಶ ವಿದೇಶಗಳ ನಡುವಿನ ಲವ್​​ ಸ್ಟೋರಿಗಳು ಬೆಳಕಿಗೆ ಬರುತ್ತಿದ್ದು, ಈಗಾಗಲೇ ಪಾಕಿಸ್ತಾನ ಸೀಮಾ ಹೈದರ್, ರಾಜಸ್ಥಾನ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ತೆರಳಿದ್ದು ಸುದ್ದಿ ಇನ್ನೂ ಹಸಿರಾಗಿರುವಂತೆಯೇ, ಸದ್ಯ ಶ್ರೀಲಂಕಾದ ಹುಡುಗಿಯೊಬ್ಬಳು ಆಂಧ್ರ ಪ್ರದೇಶದ ಯುವಕನನ್ನು ವರಿಸಿರುವ ಘಟನೆ ಬೆಳಕಿಗೆ ಬಂದಿದೆ.ಇದನ್ನೂ ಓದಿ:ಮಹಿಳೆಯರ ಗ್ಯಾಂಗ್​ ಕಟ್ಟಿಕೊಂಡು ಎರಡನೇ ಪತ್ನಿಗೆ ಮನಬಂದಂತೆ ಥಳಿಸಿದ ಪತಿಯ ಮೊದಲ ಹೆಂಡತಿ..!ಚಿತ್ತೂರು ಜಿಲ್ಲೆಯ ವಿ.ಕೋಟ ಮಂಡಲದ ಅರಿಮಾಕುಲಪಲ್ಲೆ ಗ್ರಾಮದ ನಿವಾಸಿಯಾಗಿರುವ ಲಕ್ಷ್ಮಣ್ ಎಂಬ ಯುವಕ, ಶ್ರೀಲಂಕಾದ ಬೆಳಂಗುಡು ಪ್ರದೇಶದ ವಿಘ್ನೇಶ್ವರಿಕಿ ಎಂಬ ಯುವತಿಯೊಂದಿಗೆ ಫೇಸ್ ಬುಕ್​​ನಲ್ಲಿ ಸ್ನೇಹ ಬೆಳೆಸಿದ್ದು, ಈ ಸ್ನೇಹವು ದಿನಗಳೆದಂತೆ ಪ್ರೀತಿಗೆ ತಿರುಗಿತ್ತು. ಈ ಜೋಡಿಯು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೇ ತಿಂಗಳ 8ರಂದು ವಿಘ್ನೇಶ್ವರಿಯು ಪ್ರವಾಸಿ ವೀಸಾ ಪಡೆದುಕೊಂಡು ಚೆನ್ನೈಗೆ ಆಗಮಿಸಿದ್ದಾಳೆ. ಮೇಸ್ತ್ರಿಯಾಗಿ ಜೀವನ ಸಾಗಿಸುತ್ತಿರುವ ಲಕ್ಷ್ಮಣ್, ಅವಳನ್ನು ಆತ್ಮೀಯವಾಗಿ ಸ್ವಾಗತಿಸಿ ತನ್ನ ಮನೆಗೆ ಕರೆತಂದರು.ಕೊನೆಗೆ ಈ ಜೋಡಿಯು ಜುಲೈ 20ರಂದು ವೆಂಕಟಗಿರಿಕೋಟಾದ ಸಾಯಿಬಾಬಾ ದೇವಸ್ಥಾನದಲ್ಲಿ ವಿವಾಹವಾಗಿದ್ದು, ವಿಶ್ಲೇಶ್ವರಿ ಇಲ್ಲಿ ವಾಸ್ತವ್ಯ ಹೂಡಿರುವ ವಿಷಯ ತಿಳಿದ ಜಿಲ್ಲಾಧಿಕಾರಿಗಳು ಮೂರು ದಿನಗಳ ಹಿಂದೆ ದಂಪತಿಯನ್ನು ಸಂಪರ್ಕಿಸಿದ್ದರು. ಅಲ್ಲದೇ, ಪೊಲೀಸ್ ವರಿಷ್ಠಾಧಿಕಾರಿ ವೈ.ರಿಶಾಂತ್ ರೆಡ್ಡಿ, ಈ ದಂಪತಿಯನ್ನು ಭೇಟಿಯಾಗಿ ಆಕೆಗೆ ಪ್ರವಾಸಿ ವೀಸಾ ಅವಧಿ ಮುಗಿಯುವ ಆಗಸ್ಟ್ 6ರೊಳಗೆ ಶ್ರೀಲಂಕಾಕ್ಕೆ ಮರಳಬೇಕು ಎಂದು ನೋಟಿಸ್ ನೀಡಲಾಗಿದೆ.ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಸೀಮಾ ಹೈದರ್​ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅದರಂತೆ ಭಾರತ ಮೂಲದ ಅಂಜು ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಸ್ರುಲ್ಲಾ ಎಂಬ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತೆರಳಿ ಮತಾಂತರಗೊಂಡು ಮದುವೆಯಾಗಿದ್ದರು. ಜತೆಗೆ ಚೀನಾದ ಗಾವೊ ಪೆಂಗ್(21)​ ತನ್ನ ಪ್ರಿಯಕರ ಜಾವೇದ್​(18)ನನ್ನು ಭೇಟಿಯಾಗಲು ಪಾಕಿಸ್ತಾದ ಇಸ್ಲಾಮಾಬಾದ್​ಗೆ ತೆರಳಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
