ಅನಂತಪುರ (ಆಂಧ್ರ ಪ್ರದೇಶ):ಆತಂಕಕಾರಿ ಘಟನೆಯೊಂದರಲ್ಲಿ ಮದುವೆಗೆ ಕುಟುಂಬದ ಹಿರಿಯರು ಒಪ್ಪದಿದ್ದಕ್ಕೆ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರಾಕರಿಸಿದ ಪ್ರೇಯಸಿಯನ್ನು ಅನಂತಪುರದ ಯುವಕನೊಬ್ಬ ಕೊಲೆ ಮಾಡಿ, ಪೊಲೀಸರ ವಶವಾಗಿದ್ದಾನೆ.
ಒಂದೇ ಪಟ್ಟಣದಲ್ಲಿ ವಾಸವಿದ್ದ ಶಾಹೀದಾ ಬೇಗಂ ಮತ್ತು ರಘು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಮದುವೆಗೆ ಪಾಲಕರು ಒಪ್ಪಿರಲಿಲ್ಲ. ಹೀಗಾಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ರಘು, ಶಾಹೀದಾಳ ಮನವೊಲಿಸಿದ್ದ.
ಆರಂಭದಲ್ಲಿ ಓಕೆ ಅಂದಿದ್ದ ಶಾಹೀದಾ ಬಳಿಕ ತನ್ನ ನಿರ್ಧಾರ ಬದಲಿಸಿದ್ದಳು. ರಘು ಕೀಟನಾಶ ಸೇವಿಸಿ ಶಾಹೀದಾಳನ್ನು ಸೇವಿಸುವಂತೆ ಒತ್ತಾಯ ಮಾಡಿದ್ದ ಆದರೆ, ಶಾಹೀದಾ ನಿರಾಕರಿಸಿದಳು. ಇದರಿಂದ ಅಸಮಾಧಾನಗೊಂಡ ರಘು ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ. ಇತ್ತ ವಿಷ ಸೇವಿಸಿದ್ದ ರಘು ಹೇಗಾದರೂ ಬದುಕಬೇಕೆಂದು ಆಸ್ಪತ್ರೆಗೆ ದಾಖಲಾಗಿ ಜೀವ ಉಳಿಸಿಕೊಂಡಿದ್ದ.
ಇದನ್ನೂ ಓದಿ:ಪುಟ್ಟ ಬಾಲಕಿಯ ಹೊಟ್ಟೆಯೊಳಗಿದ್ದವು 9 ಮ್ಯಾಗ್ನೆಟ್ ಗುಂಡು, ಲಿಥಿಯಂ ಬ್ಯಾಟರಿ!
ಶಾಹೀದಾ ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಮನಸ್ಸು ಮಾಡಿದ್ದಳು. ಆದರೆ, ರಘುಗೆ ಮಾತ್ರ ಶಾಹೀದಾಳ ಮೇಲೆ ತೀವ್ರ ಕೋಪವಿತ್ತು. ಅದನ್ನು ತೋರಿಸಿಕೊಳ್ಳದೆ ಆಕೆಯೊಂದಿಗೆ ಚೆನ್ನಾಗಿಯೇ ಇದ್ದ. ಶಾಹೀದಾಳಿಗೆ ಮದುವೆ ತಯಾರಿ ನಡೆಯುತ್ತಿರುವಾಗಲೇ ನಿನ್ನೊಂದಿಗೆ ಮಾತನಾಡಬೇಕಿದೆ ಎಂದು ರಘು ಕರೆಸಿಕೊಂಡಿದ್ದ. ನ. 17ರಂದು ರಘುವಿನ ಮೇಲೆ ನಂಬಿಕೆ ಇಟ್ಟು ಶಾಹೀದಾ ಆತನ ಬಳಿ ಬಂದಿದ್ದಳು.
ಅದಾದ ಬಳಿಕ ಶಾಹೀದಾ ಮನೆಗೆ ಮರಳದೇ ಇದ್ದದ್ದನ್ನು ಗಮನಿಸಿದ ಪಾಲಕರು ಸಾಕಷ್ಟು ಹುಡುಕಾಟದ ಬಳಿಕ ರಘುವನ್ನು ಮಗಳೆಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ, ಆತನಿಂದ ಸಮರ್ಪಕವಾದ ಉತ್ತರ ಬರದಿದ್ದಾಗ ಆತಂಕದಿಂದಲೇ ದೂರು ದಾಖಲಿಸಿದ್ದರು. ಬಳಿಕ ಶಾಹೀದಾಳ ಮೃತದೇಹ ತುಂಬಿಗನೂರು ಬಳಿಯ ಎಚ್​ಎಲ್​ಸಿ ನಾಲೆ ಬಳಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರಘು ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್​)
ಐವರು ಯುವಕರು ನೀರುಪಾಲು! ಬೀಗರ ಊಟಕ್ಕೆ ಬಂದು ಮೃತ್ಯು ಕೂಪಕ್ಕೆ ಸಿಲುಕಿದ್ದೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 17 =
Remember me
