ಇಬ್ರಾಹಿಂಪಟ್ಟಣ:ಚಿತ್ರಮಂದಿರ ಹೊರಗಡೆ ನಿಂತಿದ್ದ ಯುವಕನೊಬ್ಬನನ್ನು ಎಲ್ಲರ ಕಣ್ಮುಂದೆಯೇ ಅಪರಿಚಿತರು ಅಪಹರಿಸಿರುವ ಘಟನೆ ಆಂಧ್ರಪ್ರದೇಶದ ಎನ್‌ಟಿಆರ್‌ ಜಿಲ್ಲೆಯ ಇಬ್ರಾಹಿಂಪಟ್ಟಣದಲ್ಲಿ ನಡೆದಿದೆ.ಅಪರಹರಣಕ್ಕೆ ಒಳಗಾದ ಯುವಕನನ್ನು ಗಂಪಲಗುಡೆಂ ಮಂಡಲದ ವಿನಗಡಪದ ದಿಲೀಪ್ ಎಂದು ಗುರುತಿಸಲಾಗಿದ್ದು, ದಿಲೀಪ್ ಆನ್‌ಲೈನ್ ಬೆಟ್ಟಿಂಗ್ ವ್ಯಸನಿಯಾಗಿದ್ದು, ಅದರಲ್ಲಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದನು. ಈತನ ಕಿಡ್ನ್ಯಾಪ್​ ಆದ ಕೂಡಲೇ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ಬೆನ್ನಟ್ಟಿ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ:ಪ್ರಿಯಕರನೊಂದಿಗೆ ಮನೆಯಲ್ಲಿಯೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪತ್ನಿ: ಪತಿ ಮಾಡಿದ್ದೇನು..?ಘಟನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಕಿಡ್ನಾಪ್ ಆದ ಯುವಕ ದಿಲೀಪ್​ ಉದ್ಯೋಗದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವುದು ಗೊತ್ತಾಗಿದೆ. ಇಬ್ರಾಹಿಂಪಟ್ಟಣ ಭಾಗದ ಯುವಕರಿಗೆ ಉದ್ಯೋಗದ ಹೆಸರಿನಲ್ಲಿ ಮೋಸ ಮಾಡಿದ್ದು ಅಲ್ಲದೇ ತನಗೆ ಗೊತ್ತಿರುವವರು ಸರ್ಕಾರದಲ್ಲಿದ್ದಾರೆ, ಹಣ ಕೊಟ್ಟರೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಲವರಿಂದ 45 ಲಕ್ಷ ರೂ.ವರೆಗೆ ವಸೂಲಿ ಮಾಡಿದ್ದ ಎಂದು ಆರೋಪಿಸಲಾಗಿದೆ.ಹಣ ತೆಗೆದುಕೊಂಡ ನಂತರ ದಿಲೀಪ್ ನಾಪತ್ತೆಯಾಗಿದ್ದ ಬಿಡುತ್ತಿದ್ದ. ಇತ್ತ ಕೆಲಸವೂ ಇಲ್ಲದೇ ಕೊಟ್ಟ ಹಣವೂ ವಾಪಾಸ್ಸು ಬಾರದಿದ್ದಕ್ಕೆ ಬೇಸತ್ತಿದ್ದ ನಾಲ್ಕೈದು ಯುವಕರ ಗುಂಪು ಆತನನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿ ಅದರಂತೆ ಆತನನ್ನು ಅಪಹರಿಸಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
