ಬರೇಲಿ:ಸ್ಕೂಟಿ ಮೇಲೆ ಕುಳಿತಿದ್ದ ಮೂವರು ಯುವಕರು ಮತ್ತೊರ್ವ ಯುವಕನನ್ನು ಸ್ಕೂಟಿಗೆ ಕಟ್ಟಿ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಬಳಿ ನಡೆದಿದೆ.
ಇದನ್ನೂ ಓದಿ:ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೊರಟಿದ್ದ ಬಾಲಕಿ: ವಿಮಾನ ನಿಲ್ದಾಣದಲ್ಲಿ ಏನು, ಹೇಗೆ ಮಾತನಾಡಬೇಕು ಎಂದು ಹೇಳಿಕೊಟ್ಟಿದ್ದ ಯುವಕ..
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬರೇಲಿ ಜಿಲ್ಲೆಯ ಬರದರಿ ಪ್ರದೇಶದ ಮೊಹಲ್ಲಾ ಸಂಜಯ್ ನಗರದ ಹೋಳಿ ಚೌಕದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 50 ಸೆಕೆಂಡುಗಳ ಈ ವಿಡಿಯೋದಲ್ಲಿ, ಘಟನೆಯು 35 ಸೆಕೆಂಡುಗಳ ನಂತರ ಗೋಚರಿಸುತ್ತಿದೆ. ಸ್ಕೂಟಿಯಲ್ಲಿ ಕುಳಿತಿದ್ದ ಮೂವರು ಪುಂಡರು ಯುವಕನೊಬ್ಬನನ್ನು ಸ್ಕೂಟಿಯ ಹಿಂದೆ ಕಟ್ಟಿ ಎಳೆದೊಯ್ದಿದ್ದು, ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.
बरेली में दबंगों ने युवक को स्कूटी के पीछे बांधकर घसीटा
◆ सीसीटीवी में कैद हुई घटना#Bareilly| CCTV Video Bareilly#CrimeNewspic.twitter.com/NhZnCdI9lQ
— News24 (@news24tvchannel)July 28, 2023
ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದ್ದು, ಘಟನೆ ಕುರಿತು ಅಧಿಕಾರಿಗಳು ಅಕ್ಕಪಕ್ಕದ ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರಿಂದಲೂ ದೂರು ಬಂದಿಲ್ಲ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − five =
Remember me
