ನವದೆಹಲಿ:ಅಂಕಿತ್ ಸಿಂಗ್ (21) ಎಂಬಾತ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಎಡವಟ್ಟೊಂದು ಮಾಡಿಕೊಂಡು ಪೊಲೀಸರಿಂದ ಬಂಧಿತನಕ್ಕೊಳಪಟ್ಟಿದ್ದಾನೆ. ಇದಕ್ಕೆ ಕಾರಣ ಆತ ಕೇಕ್​ನ್ನು ಪಿಸ್ತೂಲ್​ನಿಂದ ಕಟ್​ ಮಾಡಿರುವುದು. ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಅಂಕಿತ್ ಸಿಂಗ್​ನನ್ನು ಪತ್ತೆ ಮಾಡಿ ದೆಹಲಿಯ ನೆಬ್​ಸರೈ ಎಂಬಲ್ಲಿ ಬಂಧಿಸಿದ್ದಾರೆ. ಆತನಿಂದ 315 ಬೋರ್ ಕಂಟ್ರಿಮೇಡ್ ಪಿಸ್ತೂಲ್ ಮತ್ತು 2 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
Taking cognizance of a viral video on social media wherein a young man was cutting cake with a pistol,#DelhiPoliceidentified the accused and arrested him from Neb Sarai along with .315 bore countrymade pistol & 2 live rounds. Case registered u/s 25 Arms Act.pic.twitter.com/CuBG65nvCP— Delhi Police (@DelhiPolice)April 1, 2023
Taking cognizance of a viral video on social media wherein a young man was cutting cake with a pistol,#DelhiPoliceidentified the accused and arrested him from Neb Sarai along with .315 bore countrymade pistol & 2 live rounds. Case registered u/s 25 Arms Act.pic.twitter.com/CuBG65nvCP
ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25ರ ಅಡಿಯಲ್ಲಿ ತಪ್ಪಿತಸ್ಥ ಅಂಕಿತ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಕಿತ್ ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಸ್ವಯಂ ಪ್ರಕರಣದ ದಾಖಲಿಸಿ ಬಂಧಿಸಿರುವ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
