ಕೊಚ್ಚಿ:ಯುವ ಮಾಡೆಲ್​ ಒಬ್ಬಳ ಮೇಲೆ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುರುವಾರ (ನ.17) ನಡೆದಿದೆ. ಮದ್ಯದ ಅಮಲಿನಲ್ಲಿ ಯುವಕರು ಮಾಡೆಲ್​ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವ ಮಾಡೆಲ್ ತನ್ನ ಫ್ರೆಂಡ್​ ಜೊತೆಯಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಬಾರ್​ ಒಂದಕ್ಕೆ ಬಂದಿದ್ದಳು. ಸುಮಾರು 10 ಗಂಟೆ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ತಕ್ಷಣ ಕೆಲ ಯುವಕರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನು ಎತ್ತಿಕೊಂಡು ತಮ್ಮ ಕಾರಿನ ಒಳಗೆ ಕೂರಿಸಿದ್ದಾರೆ. ಆದರೆ, ಆಕೆಯ ಸ್ನೇಹಿತೆಗೆ ಕಾರಿನಲ್ಲಿ ಹೋಗಲು ನಿರಾಕರಿಸಿದ್ದಾಳೆ. ಬಳಿಕ ಯುವಕರು ನಗರವನ್ನೆಲ್ಲ ಸುತ್ತಾಡಿ ಕಾರಿನ ಒಳಗೆ ಮಾಡೆಲ್​ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ ಕಾಕ್ಕನಾಡದ ಆಕೆಯ ಮನೆಗೆ ಮುಂದೆ ಡ್ರಾಪ್​ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆ ಈ ಸಂಗತಿಯನ್ನು ನಿನ್ನೆ (ನ.18) ಬೆಳಗ್ಗೆ ಆಕೆಯ ಫ್ರೆಂಡ್​ ಬಳಿ ಹೇಳಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ನಿನ್ನೆ ಬೆಳಗ್ಗೆ ದೂರು ಸ್ವೀಕರಿಸಿದ ಬೆನ್ನಲ್ಲೇ ಮಾಡೆಲ್​ ತೆರಳಿದ್ದ ಬಾರ್​ಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾರ್​ಗೆ ಆರೋಪಿ ಯುವಕರು ನೀಡಿರುವ ಗುರುತಿನ ದಾಖಲೆಗಳಲ್ಲಿ ನಕಲಿ ವಿಳಾಸ ಇರುವುದು ಪತ್ತೆಯಾಗಿದೆ.
ಪೊಲೀಸರು ಸಂತ್ರಸ್ತ ಮಹಿಳೆಯ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಕೆಯನ್ನು ವಿಚಾರಿಸಿದಾಗ ಮೂವರು ಯುವಕರು ಕೊಡುಂಗಲ್ಲೂರು ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಶನಿವಾರ (ನ.19) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕೊಚ್ಚಿಯ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಆಕೆಯನ್ನು ಕಲಮಸೇರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳೆಯ ಸ್ನೇಹಿತೆ ಉದ್ದೇಶಪೂರ್ವಕವಾಗಿಯೇ ಕಾರಿನಲ್ಲಿ ಹೋಗದಿರಲು ನಿರ್ಧರಿಸಿದಳು ಎಂದು ತೀರ್ಮಾನಿಸಲಾಗಿದೆ.(ಏಜೆನ್ಸೀಸ್​)
300 ಕೇಂದ್ರಗಳಲ್ಲಿ ಹಾಫ್​ ಸೆಂಚ್ಯುರಿ ಬಾರಿಸಿದ ‘ಕಾಂತಾರ’

ಅಭಿಷೇಕ್ ಅಂಬರೀಷ್​ ಅಭಿನಯದ ‘ಕಾಳಿ’ಗೆ ‘ಕಾಂತಾರ’ ಸಪ್ತಮಿ ಗೌಡ ನಾಯಕಿ?

ಆಶಿಕಾ ಕುಡಿದು ತೂರಾಡಿದ್ದು ನಿಜಾನಾ? ಸತ್ಯಾಂಶ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 16 =
Remember me
