ಪಟನಾ:ತೊಳೆದು ಒಣೆಸಿದ್ದ ಬಟ್ಟೆಯನ್ನು ತರಲು ಮನೆಯಿಂದ ಹೊರನಡೆದ ಯುವತಿಯನ್ನು ಯುವಕರ ಗ್ಯಾಂಗ್ ಒಂದು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಯುವತಿ ಬುಧವಾರ ಬೆಳಗ್ಗೆ ಮನೆ ಹತ್ತಿರದ ಮೋರಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಬ್ರಿಟನ್‌ನಿಂದ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತನಿಗೆ ಕರೊನಾ ; ತುಮಕೂರು ಜಿಲ್ಲಾಡಳಿತ ನಿದ್ದೆಗೆಡಿಸಿದ ವರದಿ
ಮುಜಾಫರ್​ಪುರದ ಕಾಂತಿ ಪೊಲೀಸ್​ ಠಾಣಾ ವ್ಯಾಪ್ತಿಯ ಪುಟ್ಟ ಗ್ರಾಮವೊಂದರಲ್ಲಿ ವಾಸಿಸುವ ಕುಟುಂಬದ ಮಗಳು ಮಂಗಳವಾರ ರಾತ್ರಿ 10 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಬಂದಿದ್ದಾಳೆ. ಅಂಗಳದಲ್ಲಿ ಒಣಗಿಸಿದ್ದ ಬಟ್ಟೆ ತೆಗೆದುಕೊಂಡು ರೂಮಿಗೆ ಹೋಗಲು ಮುಂದಾಗಿದ್ದಾಳೆ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಯುವಕರ ಗ್ಯಾಂಗ್​ ಒಂದು ಹಿಂದಿನಿಂದ ಆಕೆಯ ಬಾಯಿಯನ್ನು ಒತ್ತಿ ಹಿಡಿದು ಎಳೆದುಕೊಂಡು ಹೋಗಿದೆ. ಎಷ್ಟು ಹೊತ್ತಾದರೂ ಮಗಳು ಮನೆ ಒಳಗೆ ಬಾರದಿರುವುದು ನೋಡಿ ತಂದೆ ತಾಯಿ ಎಲ್ಲೆಡೆ ಮಗಳಿಗಾಗಿ ಹುಡುಕಾಡಿದ್ದಾರೆ.
ಇದನ್ನೂ ಓದಿ:ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!
ಬುಧವಾರ ಬೆಳಗ್ಗೆ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯ ಹತ್ತಿರವಿದ್ದ ಮೋರಿಯ ಬಳಿ ಸಿಕ್ಕಿದ್ದಾಳೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಗ್ರಾಮಸ್ಥರ ಸಹಾಯದಿಂದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
