ಲಖನೌ:ಯುವತಿಯೊಬ್ಬಳು ಕೋಲು ಹಿಡಿದು ಬಂದು ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಧ್ವಂಸ ಮಾಡಿರುವುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿಯ ಮೇಲೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಪತ್ರಕರ್ಪುರಂನ ಗೋಮತಿ ನಗರದಲ್ಲಿ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಪಕ್ಕದಲ್ಲಿ ಅಂಗಡಿ ತೆರೆದು, ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದ. ನನ್ನ ಮನೆಯ ಮುಂದೆಯೇ ಮಾರಾಟ ಮಾಡುತ್ತಿದ್ದಾರೆ ಅಂತಾ ಕೋಪಗೊಂಡ ಯುವತಿಯೊಬ್ಬಳು ಮಣ್ಣಿನ ಹಣತೆ ಮತ್ತು ಮಡಿಕೆಗಳ ಮೇಲೆ ನೀರು ಸುರಿದು ಆಕ್ರೋಶ ಹೊರಹಾಕಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಯುವತಿ ಕೋಲು ಹಿಡಿದು ಬಂದು ಹಣತೆ ಮತ್ತು ಮಡಿಕೆಗಳ ಮೇಲೆ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಎಲ್ಲವನ್ನು ನಾಶ ಮಾಡಿ, ಅಂಗಡಿಯ ಮಾಲೀಕನನ್ನು ನಿಂದಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಅಂಗಡಿ ಮಾಲೀಕ, ನಾನ ಪ್ರತಿ ವರ್ಷ ದೀಪಾವಳಿಯಂದು ಈ ಸ್ಥಳದಲ್ಲೇ ದೀಪಗಳನ್ನು ಮಾರುತ್ತಾ ಬರುತ್ತಿದ್ದೇವೆ ಎಂದಿದ್ದಾರೆ. ಯುವತಿ ನಡೆದುಕೊಂಡ ರೀತಿಗೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯು ಮಾಜಿ ಐಎಎಸ್ ಅಧಿಕಾರಿಯ ಮಗಳಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿಯ ವರ್ತನೆಯ ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು ಆಕೆಯ ವಿರುದ್ಧ ಸೂಕ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
यूपी लखनऊ गोमतीनगर में पत्रकारपुरम मार्केट स्थित घर से एक महिला ने बाहर आकर वहाँ लगी दुकानों को डंडों से तोड़ा,बैट चलाए और दिवाली की दीये और अन्य सजाने के सामानों को तोड़ दिया !!@lkopolice@nagarnigamlkoऐसे लोगों पर सख़्त करवाई होpic.twitter.com/DcrcNhdAlN
— Yogita Bhayana योगिता भयाना (@yogitabhayana)October 24, 2022

ನಾನು ಮತ್ತು ನನ್ನ ತಂದೆ ಶ್ರೀಮಂತರಲ್ಲ! ಜಾಹ್ನವಿ ಕಪೂರ್​ ಅಚ್ಚರಿಯ ಹೇಳಿಕೆ ಹಿಂದಿದೆ ಈ ಕಾರಣ

ಅಪ್ರಾಪ್ತೆಯನ್ನು ‘ಐಟಂ’ ಎಂದು ಕರೆದ ಯುವಕನಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!​

ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್​: ಚಾರ್ಜ್​ಶೀಟ್​ನಲ್ಲಿ ಕೀಚಕ ಕಾಂತರಾಜ್​ನ ಕರಾಳ ಇತಿಹಾಸ ಬಯಲು​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + six =
Remember me
