ತಿರುವನಂತಪುರ:ಮದುವೆಯ ದಿನವೇ ವರನೊಬ್ಬ ಫೋನ್​ ಸ್ವಿಚ್​​ ಮಾಡಿಕೊಂಡು ಬಚ್ಚಿಟ್ಟುಕೊಂಡಿದ್ದಕ್ಕೆ ಮನನೊಂದು 23 ವರ್ಷದ ಯುವತಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ಯುವತಿಯನ್ನು ಧನ್ಯಾ ಎಂದು ಗುರುತಿಸಲಾಗಿದೆ. ಈಕೆ ಕೊಲ್ಲಂನ ವಟ್ಟಪಾಡ್​ನಲ್ಲಿರುವ ಮಧು ಭವನ್​ ನಿವಾಸಿ. ಶನಿವಾರ ಬೆಳಗ್ಗೆ 8 ಗಂಟೆಗೆ ತನ್ನ ಬೆಡ್​ರೂಮ್​ನ ಬಾತ್​ರೂಮ್​ನಲ್ಲಿ ಶಾಲೂವಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಧನ್ಯಾಳ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ:ದೇಶಾದ್ಯಂತ ಬಿರುಬಿಸಿಲಿನ ಝುಳ ಹೆಚ್ಚಳ: ವಿದ್ಯುತ್ ಸರಬರಾಜಿಗೆ ಹೆಚ್ಚಿದ ಬೇಡಿಕೆ, ಕಾಡುತ್ತಿರುವ ಅಭಾವದ ಆತಂಕ
ಮೃತ ಧನ್ಯಾ, ಕೊಲ್ಲಂನ ಅಂಚಲದ ಅತಿಶಯಮಂಗಲಂ ನಿವಾಸಿ ಅಖಿಲ್​ ಎಂಬಾತನನ್ನು ಕಳೆದು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಪ್ರೀತಿಸುತ್ತಿದ್ದಳು. ಫೆ. 15ರಂದು ಮನೆಯಿಂದ ಧನ್ಯಾ ನಾಪತ್ತೆಯಾಗಿದ್ದಳು. ಇದರ ಆಧಾರದ ಮೇಲೆ ಆಕೆಯ ಕುಟುಂಬಸ್ಥರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಧನ್ಯಾ, ಅಖಿಲ್​ ಜೊತೆ ಇರುವುದು ತಿಳಿಯಿತು. ಬಳಿಕ ಧನ್ಯಾಳ ಕುಟುಂಬಸ್ಥರ ಮುಂದೆ ಆಕೆಯನ್ನು ರಿಜಿಸ್ಟರ್​ ಮದುವೆ ಆಗುವುದಾಗಿ ಅಖಿಲ್​ ಆಣೆ ಮಾಡಿದ್ದ. ನಂತರ ಮದುವೆಯ ದಿನಾಂಕವು ನಿಗದಿಯಾಯಿತು. ಅದರಂತೆ ಮದುವೆಯ ದಿನ ಧನ್ಯಾ ಮತ್ತು ಆಕೆಯ ಕುಟುಂಬ ಇಟ್ಟಿವಾ ಗ್ರಾಮ ಪಂಚಾಯಿತಿಗೆ ತೆರಳಿದರು. ರಿಜಿಸ್ಟರ್​ ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅಖಿಲ್​ ಬರಲೇ ಇಲ್ಲ.
ಧನ್ಯಾ ಮತ್ತು ಆಕೆಯ ಕುಟುಂಬ ಅಖಿಲ್​ ಫೋನ್​ಗೆ ಎಷ್ಟೇ ಪ್ರಯತ್ನಿಸಿದರೂ ಆತನ ಫೋನ್​ ಸ್ವಿಚ್​ ಆಫ್​ ಅಂತ ಹೇಳುತ್ತಿತ್ತು. ಸಾಕಷ್ಟು ಸಮಯದವರೆಗೂ ಕಾದು, ಅಖಿಲ್​ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಧನ್ಯಾ ಮತ್ತು ಆಕೆಯ ಕುಟುಂಬ ಬಹಳ ಬೇಸರದಿಂದ ಮತ್ತೆ ಮನೆಗೆ ಮರಳಿದರು.
ಇದನ್ನೂ ಓದಿ:ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ
ಅಖಿಲ್​ ಮಾಡಿದ ವಂಚನೆಯಿಂದ ಮನನೊಂದು ಅದರಿಂದ ಹೊರಬರಲಾಗದೇ ಧನ್ಯಾ ಸಾವಿನ ಹಾದಿ ಹಿಡಿದಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಸಂಬಂಧ ಕಡಕ್ಕಲ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅಖಿಲ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ನಿಮ್ಮ ಕಣ್ಣಿಗೊಂದು ಸವಾಲು: ಜೀನಿಯಸ್​ ಮಾತ್ರ ಈ ಫೋಟೋದಲ್ಲಿರುವ ಜಿಂಕೆಯನ್ನು ಪತ್ತೆಹಚ್ಚಲು ಸಾಧ್ಯ!

ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ! ಸಹೋದ್ಯೋಗಿಗಳು ಕೊಟ್ಟ ಕಾರಣ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
