ಅಹಮದಾಬಾದ್:ಇನ್​ಸ್ಟಾಗ್ರಾಂನಲ್ಲಿ ಬೆಳೆದ ಸ್ನೇಹವು ಅಪರಾಧಿಕ ತಿರುವು ಪಡೆದುಕೊಂಡಿರುವ ಪ್ರಸಂಗವೊಂದು ಗುಜರಾತಿನಿಂದ ವರದಿಯಾಗಿದೆ. ಏರ್​ ಹೋಸ್ಟೆಸ್​ ತರಬೇತಿ ಪಡೆಯುತ್ತಿರುವ ಯುವತಿಯೊಬ್ಬಳನ್ನು ಅಹಮದಾಬಾದಿನ ವೇಜಲ್​ಪುರದ ಇಂಜಿನಿಯರಿಂಗ್​ ವಿದ್ಯಾರ್ಥಿ ರೇಪ್​ ಮಾಡಿ, ಆ ವಿಡಿಯೋ ಕ್ಲಿಪ್ಪನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಾ ಮತ್ತೆ ಮತ್ತೆ ಶೋಷಿಸಿರುವ ಆರೋಪ ಕೇಳಿಬಂದಿದೆ.
22 ವರ್ಷದ ಸಂತ್ರಸ್ತೆಯು 7 ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಜಿತ್​ ತ್ರಿವೇದಿ ಎಂಬ ಇಂಜಿನಿಯರಿಂಗ್​ ವಿದ್ಯಾರ್ಥಿಯನ್ನು ಭೇಟಿ ಮಾಡಿದಳು. ಚ್ಯಾಟ್​ ಮಾಡುತ್ತಾ ಸ್ನೇಹ ಬೆಳೆಸಿಕೊಂಡ ಮೇಲೆ ಇಬ್ಬರೂ ಫೋನ್​ ನಂಬರ್​ ಬದಲಾಯಿಸಿಕೊಂಡು ಮುಖತಃ ಭೇಟಿಯಾಗುವ ಯೋಜನೆ ಮಾಡಿದರು. ಕಳೆದ ಏಪ್ರಿಲ್​ನಲ್ಲಿ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದ ಅಜಿತ್​, ಕೋಲ್ಡ್​ ಡ್ರಿಂಕ್​ನಲ್ಲಿ ಮತ್ತು ತರಿಸುವ ಔಷಧಿ ಸೇರಿಸಿದ. ಅದನ್ನು ಕುಡಿದು ಆಕೆ ಪ್ರಜ್ಞೆ ತಪ್ಪಿದಾಗ, ಲೈಂಗಿಕ ಅತ್ಯಾಚಾರ ನಡೆಸಿದ ಎನ್ನಲಾಗಿದೆ.
ಇದನ್ನೂ ಓದಿ:ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ
ತನ್ನ ಹೇಯಕೃತ್ಯವನ್ನು ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಯುವಕ, ಬ್ಲ್ಯಾಕ್​ಮೇಲ್​ ಮಾಡುತ್ತಾ ಮತ್ತೆ ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅವಳು ನಿರಾಕರಿಸಿದರೆ ಚೆನ್ನಾಗಿ ಥಳಿಸುತ್ತಿದ್ದ ಎಂದೂ ಸಹ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ಆರೋಪಿ ಅಜಿತ್​ ತ್ರಿವೇದಿಯನ್ನು ಆತನ ವೇಜಲ್​ಪುರದ ಮನೆಯಿಂದ ಬಂಧಿಸಿದ್ದಾರೆ.(ಏಜೆನ್ಸೀಸ್)
‘ಈಸ್ಟ್​ ಇಂಡಿಯಾ ಕಂಪೆನಿ ಪ್ರವೃತ್ತಿ ಬಿಡಿ’: ಇನ್​ಸ್ಟಾಗ್ರಾಂ ಮೇಲೆ ಕಂಗನಾ ಗರಂ!

ಅಂಡರ್​ವೇರ್​ನಲ್ಲಿ ಓಡಾಡಿದ್ದ MLA: ‘ಹೆಂಡ ಕುಡಿದಿದ್ರು, ನನ್ನ ಒಡವೆ ಕಿತ್ಕೊಂಡ್ರು’ ಅಂತ ಸಹಪ್ರಯಾಣಿಕನ ದೂರು!

ಕೆಎಸ್ಆರ್​ಟಿಸಿಗೆ 60 ವರ್ಷ ಪೂರೈಸಿದ ಸಂಭ್ರಮ: ರಾಜಧಾನಿಯಲ್ಲಿ ಅದ್ಧೂರಿ ಆಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
