ಮುಂಬೈ:ಫೇಶಿಯಲ್​ ಮಾಡಿದ ಬಳಿಕವೂ ಮುಖದಲ್ಲಿ ಸುಟ್ಟ ಕಲೆಗಳು ಉಳಿದುಕೊಂಡ ಹಿನ್ನೆಲೆಯಲ್ಲಿ ಸಲೂನ್​ ವಿರುದ್ಧ 23 ವರ್ಷದ ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.
ಮುಂಬೈನ ಅಂಧೇರಿಯಲ್ಲಿರುವ ಸಲೂನ್​ನಲ್ಲಿ ಫೇಶಿಯಲ್​ ಮಾಡಿಸಿಕೊಂಡ ಬಳಿಕ ಮುಖದಲ್ಲಿ ಸುಟ್ಟ ಕಲೆಗಳು ಉಳಿದುಕೊಂಡಿವೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಸಿದ್ದಾಳೆ.
ಇದನ್ನೂ ಓದಿ:ಎಸ್​ಐ ಅಕ್ರಮ ನ್ಯಾಯಾಂಗ ತನಿಖೆ?: ಸಚಿವ ಸಂಪುಟ ಸಭೆಯಲ್ಲೂ ಚರ್ಚೆ; ಶೀಘ್ರವೇ ಆದೇಶ ನಿರೀಕ್ಷೆ
ಜೂನ್​ 17ರಂದು ಸಂತ್ರಸ್ತೆ 17,500 ರೂಪಾಯಿ ಖರ್ಚು ಮಾಡಿ ಫೇಶಿಯಲ್​ ಮಾಡಿಸಿದ್ದಾಳೆ. ಸಲೂನ್ ಸಿಬ್ಬಂದಿ ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಬಳಸಿದ್ದರಿಂದ ನನಗೆ ಅನಾನುಕೂಲವಾಗಿದೆ. ಮುಖದಲ್ಲಾದ ಬದಲಾವಣೆಯ ಬಗ್ಗೆ ಸಲೂನ್​ ಸಿಬ್ಬಂದಿಗೆ ತಿಳಿಸಿದರೂ ಅವರು ನನ್ನನ್ನು ನಿರ್ಲಕ್ಷಿಸಿದರು.
ಇದು ಯಾವುದೋ ಅಲರ್ಜಿಯಿಂದ ಆಗಿರಬಹುದು ಎಂದು ಸಿಬ್ಬಂದಿಯ ಪ್ರತಿಕ್ರಿಯೆ ನೀಡಿದರು. ನಾನೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸುಟ್ಟ ಗಾಯದ ಗುರುತುಗಳು ಶಾಶ್ವತ ಎಂದು ವೈದ್ಯರು ಹೇಳಿದ್ದನ್ನು ಕೇಳಿ ನನಗೆ ಶಾಕ್​ ಆಯಿತು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಇದನ್ನೂ ಓದಿ:ತಂದೆ ವರ್ಗಾವಣೆ, ಮಗಳ ನಿಯೋಜನೆ: ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ
ಸದ್ಯ ಸಲೂನ್​ ವಿರುದ್ಧ ಯುವತಿ ದೂರು ನೀಡಿದ್ದಾರೆ. ಈ ಸಂಬಂಧ ಅಂಧೇರಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಜೀನಿಯಸ್​ ಮಾತ್ರ ಕೇವಲ 10 ಸೆಕೆಂಡ್​ಗಳಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಹುಡುಕಬಲ್ಲರು!

ಟೈಟಾನಿಕ್​ ಅವಶೇಷ ವೀಕ್ಷಿಸಲು ಹೋಗಿ ನಾಪತ್ತೆಯಾಗಿದ್ದ ಐವರು ಬದುಕಿರುವ ಸಾಧ್ಯತೆ: ಸಿಕ್ಕಿತು ಮಹತ್ವದ ಸುಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
