ಇಂದೋರ್:ಊಟದ ಬಳಿಕ ಮಾವು ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಘಟನೆಯು ಮಧ್ಯಪ್ರದೇಶದ ಇಂದೋರ್​​ ಬಳಿಯ ಬಿಜಾಲ್​ಪುರ ಎಂಬಲ್ಲಿ ನಡೆದಿದೆ.ಅರ್ಚನಾ(23) ಎಂಬ ಯುವತಿಯೇ ಮೃತ ದುರ್ದೈವಿಯಾಗಿದ್ದು, ಈಕೆಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಯುವತಿಯು ಜುಲೈ 10ರಂದು ರಾತ್ರಿ ಊಟವಾದ ಬಳಿಕ ಮಾವಿನ ಹಣ್ಣಿನ ಸೇವನೆಯನ್ನು ಮಾಡಿದ್ದಳು. ಅದೇ ದಿನ ತಡರಾತ್ರಿ ಯುವತಿಯ ಆರೋಗ್ಯ ಹಠಾತ್​​ ಆಗಿ ಹದಗೆಟ್ಟು ತೀವ್ರವಾದ ಸುಸ್ತು ಹಾಗೂ ತಲೆನೋವಿನಿಂದಾಗಿ ಅಸ್ವಸ್ಥಳಾಗಿದ್ದಾಳೆ.ಇದನ್ನೂ ಓದಿ:ಕಾಲೇಜ್​​ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣ: ಆರು ಪಿಎಫ್‌ಐ ಕಾರ್ಯಕರ್ತರು ದೋಷಿ, ಐವರನ್ನು ಖುಲಾಸೆಗೊಳಿಸಿದ ನ್ಯಾಯಾಲಯಕೂಡಲೇ ಯುವತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಆಕೆಯ ಬಿಪಿ ನಿರಂತರವಾಗಿ ಕಡಿಮೆಯಾಗಿ ಇದ್ದಕ್ಕಿದ್ದಂತೆ ನಿಧನಳಾಗಿದ್ದಾಳೆ. ಕೂಡಲೇ ಆಸ್ಪತ್ರೆಯ ವ್ಯವಸ್ಥಾಪಕರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕವಷ್ಟೇ ಯುವತಿಯ ಸಾವಿನ ನಿಖರ ಕಾರಣ ಬಹಿರಂಗಪಡಿಸಲು ಸಾಧ್ಯ. ಈಗಾಗಲೇ ಕುಟುಂಬಸ್ಥರ ಹೇಳಿಕೆ ಪಡೆದು ತನಿಖೆ ನಡುಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಗ್ರಾಮದಲ್ಲಿ ಮಾವಿನ ಹಣ್ಣು ತಿಂದು ಹಲವರು ಅಸ್ವಸ್ಥರಾಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
