ನವದೆಹಲಿ:ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು ಇಂದು ಸುಪ್ರೀಂಕೋರ್ಟ್​ ಹೊರಡಿಸಿದ ತೀರ್ಪು ಕರ್ನಾಟಕಕ್ಕೆ ಬೇಸರ ಉಂಟು ಮಾಡಿರುವುದಂತೂ ನಿಜ. ಆದರೆ, ತಮಿಳುನಾಡು ವಾದಕ್ಕೂ ಹಿನ್ನಡೆಯಾಗಿದೆ.
ಸುಪ್ರೀಂಕೋರ್ಟ್​ ಮುಂದೆ ತಮಿಳುನಾಡು ಪರ ವಕೀಲ ಮುಕುಲ್​ ರೋಹಟಗಿ ವಾದ ಮಂಡಿಸಿದರು. ಕರ್ನಾಟಕ ಈಗ ಬಿಡುತ್ತಿರುವ ನೀರು ಸಾಕಾಗುವುದಿಲ್ಲ. ಇನ್ನು ಹೆಚ್ಚಿನ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ಕೋರಿದರು.
ಆದರೆ, ತಮಿಳುನಾಡು ವಾದವನ್ನು ಪುರಷ್ಕರಿಸದ ಸುಪ್ರೀಂಕೋರ್ಟ್​ ಹೆಚ್ಚು ನೀರು ಬಿಡಬೇಕು ಎಂಬ ನಿಮ್ಮ ವಾದವನ್ನು ನಾವು ಒಪ್ಪಲಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವೂ ತಜ್ಞರಿಂದ ಕೂಡಿದ ಮತ್ತು ವಾಸ್ತವಾಗಳನ್ನು ಅರಿತೇ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಕೋರ್ಟ್​ ಹೇಳಿತು.
ಇದನ್ನೂ ಓದಿ:ಚಿನ್ನಾಭರಣ ಖರೀದಿಗೆ ಸುಗ್ಗಿಕಾಲ; ಇಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ
ಸದ್ಯಕ್ಕೆ ಸುಪ್ರೀಂಕೋರ್ಟ್​ ನೀಡಿರುವ ಆದೇಶದಂತೆ ಕರ್ನಾಟಕ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್​ನಂತೆ 15 ದಿನಗಳವರೆಗೆ ನೀರು ಹರಿಸಬೇಕಿದೆ. ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ಕೂಡ ಇದೇ ಆದೇಶವನ್ನು ಹೊರಡಿಸಿತ್ತು. ಇದಾದ ಬಳಿಕ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದಲ್ಲೂ ಇದೇ ಸೂಚನೆ ನೀಡಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ಕೂಡ ಇದನ್ನೇ ತನ್ನ ತೀರ್ಪಿನಲ್ಲಿ ಮುಂದುವರಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ.18ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ತಮಿಳುನಾಡು ಹೆಚ್ಚು ನೀರು ಬಿಡಲು ಪಟ್ಟು ಹಿಡಿದಿತ್ತು. ಪ್ರತಿದಿನ 12,500 ಕ್ಯೂಸೆಕ್​ನಂತೆ 15 ದಿನ​ ನೀರನ್ನು ಬಿಡುವಂತೆ ತಮಿಳುನಾಡು ಮನವಿ ಮಾಡಿತ್ತು. ಆದರೆ, 5 ಸಾವಿರ ಕ್ಯೂಸೆಕ್​​ ನೀರು ಬಿಡುವಂತೆ ಪ್ರಾಧಿಕಾರ ಆದೇಶ ಹೊರಡಿಸಿತ್ತು.
CWRC ಆದೇಶದಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲು CWMA ಸಭೆಯಲ್ಲಿ ಕರ್ನಾಟಕಕ್ಕೆ ಸೂಚನೆ

ಕರ್ನಾಟಕಕ್ಕೆ ಸುಪ್ರೀಂ ಶಾಕ್​: 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್​ ನೀರು ಹರಿಸಲು ಆದೇಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 + nine =
Remember me
