ನವದೆಹಲಿ:ಹೊಸ ವೇತನ ನಿಯಮದಡಿಯಲ್ಲಿ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಸೂಚಿಸಿರುವುದರಿಂದ ಎಲ್ಲ ಕಂಪೆನಿಗಳು ತಮ್ಮ ವೇತನ ಪ್ಯಾಕೇಜ್‌ಗಳನ್ನು ಪುನರ್ರಚಿಸುವ ಅಗತ್ಯ ಎದುರಾಗಿದ್ದು, ಮುಂದಿನ ವರ್ಷದಿಂದ ಉದ್ಯೋಗಿಗಳ ಟೇಕ್-ಹೋಮ್ ಸ್ಯಾಲರಿಯಲ್ಲಿ ಕಡಿತಗೊಳ್ಳುವ ಸಾಧ್ಯತೆ ಇದೆ.
2019ನೇ ವೇತನ ಸಂಹಿತೆಯ ಭಾಗವಾಗಿರುವ ಹೊಸ ಪರಿಹಾರ ನಿಯಮಗಳನ್ನು ನೌಕರರು ಮುಖ್ಯವಾಗಿ ಗಮನಿಸಬೇಕಾಗಿದ್ದು, ಈ ಹೊಸ ನಿಯಮ ಮುಂದಿನ ಹಣಕಾಸು ವರ್ಷ ಏಪ್ರಿಲ್​ನಿಂದ ಜಾರಿಗೆ ಬರಲಿದೆ. ಹೊಸ ನಿಯಮಗಳ ಪ್ರಕಾರ ಭತ್ಯೆಗಳು ಒಟ್ಟು ಸಂಬಳ ಅಥವಾ ಪರಿಹಾರದ ಶೇ. 50ರಷ್ಟನ್ನು ಮೀರಬಾರದು. ಅಂದರೆ ಮೂಲ ವೇತನ ಶೇ. 50 ರಷ್ಟಿರಬೇಕು.
ಈ ನಿಯಮಗಳನ್ನು ಉದ್ಯೋಗದಾತರು ಅನುಸರಿಸಬೇಕಾಗಿರುವುದರಿಂದ ಸಂಬಳದ ಮೂಲ ವೇತನ ಘಟಕವನ್ನು ಹೆಚ್ಚಿಸಬೇಕಾಗಿದೆ. ಇದರಿಂದ ಸಹಜವಾಗಿಯೇ ಉದ್ಯೋಗಿಗಳ ಗ್ರ್ಯಾಚುಟಿ ಪಾವತಿಗಳು ಮತ್ತು ಭವಿಷ್ಯ ನಿಧಿ (ಪಿಎಫ್​)ಯ ಪಾವತಿಯ ಅನುಪಾತದಲ್ಲಿ ಏರಿಕೆಯಾಗಲಿದೆ.
ಇದನ್ನೂ ಓದಿ:ನನ್ನ ಮುದ್ದಿನ ಮೊಮ್ಮಗಳು ಎಂದ ಅಜ್ಜನ ಖಾತೆಗೇ ಲವರ್​ ಜತೆ ಸೇರಿ ಕನ್ನ ಹಾಕಿದ ಕಳ್ಳಿ!
ಇಂತಹ ಏರಿಕೆಯಿಂದಾಗಿ ಉದ್ಯೋಗಿಗಳು ಟೇಕ್​ ಹೋಮ್​ ಸ್ಯಾಲರಿಯಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಇದೇ ವೇಳೆ ಉದ್ಯೋಗಿಯ ನಿವೃತ್ತಿ ನಂತರದ ದೊರೆಯುವ ಪರಿಹಾರದ ಮೊತ್ತವೂ ಸಹ ಹೆಚ್ಚಾಗಲಿದೆ.
ಪ್ರಸ್ತುತ, ಹೆಚ್ಚಿನ ಖಾಸಗಿ ಕಂಪನಿಗಳು ಒಟ್ಟು ಪರಿಹಾರದ ಭತ್ಯೆ ರಹಿತ ಭಾಗವನ್ನು ಶೇಕಡಾ 50ಕ್ಕಿಂತ ಕಡಿಮೆ ಇಡಲು ಬಯಸುತ್ತವೆ ಮತ್ತು ಭತ್ಯೆಯ ಭಾಗವು ಹೆಚ್ಚಾಗಿದೆ. ಹೊಸ ನಿಯಮ ಜಾರಿಗೆ ಬಂದರೆ ಈ ನಿಯಮಗಳಲ್ಲಿ ಬದಲಾವಣೆ ಆಗಲಿದ್ದು, ಸಾಮಾನ್ಯವಾಗಿ ಹೆಚ್ಚಿನ ಭತ್ಯೆಗಳನ್ನು ಪಡೆಯುತ್ತಿರುವ ಖಾಸಗಿ ಕಂಪನಿ ಉದ್ಯೋಗಿಗಳ ಸಂಬಳದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇನ್ನು ಹೊಸ ನಿಯಮಗಳ ಪ್ರಕಾರ, ಉದ್ಯೋಗದಾತರು 50% ಮೂಲ ವೇತನದ ಅಗತ್ಯವನ್ನು ಪೂರೈಸಲು ನೌಕರರ ಮೂಲ ವೇತನವನ್ನು ಹೆಚ್ಚಿಸಬೇಕಾಗುತ್ತದೆ.(ಏಜೆನ್ಸೀಸ್​)
ರಾಜಸ್ಥಾನದಲ್ಲೂ ಬಿಜೆಪಿಗೆ ಭರ್ಜರಿ ಗೆಲುವು: ಮುಖ್ಯಮಂತ್ರಿ ಗೆಹ್ಲೋಟ್​ಗೆ ಹಿನ್ನಡೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 − one =
Remember me
