ನವದೆಹಲಿ:ಹೊಸ ಕೇಂದ್ರ ಸಚಿವ ಸಂಪುಟದೊಂದಿಗೆ ಗುರುವಾರ ರಾತ್ರಿ ಮೊದಲ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, “ನೀವು ಮಾಡುವಂತಹ ಕೆಲಸಗಳು ಮಿಂಚಬೇಕು ಹೊರತು ನೀವಲ್ಲ” ಎಂದು ಹೊಸ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.
ಮಾಧ್ಯಮಗಳ ಮುಂದೆ ಅನವಶ್ಯಕ ಹೇಳಿಕೆಗಳನ್ನು ಕೊಡದಿರಿ ಬದಲಿಗೆ ಮಾಧ್ಯಮ ಶಕ್ತಿಯನ್ನು ಮಂತ್ರಿಮಂಡಲದ ಕಾರ್ಯಕ್ಕೆ ಸೇರಿಸಿಕೊಳ್ಳಿ ಎಂದು ಇದೇ ವೇಳೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ನೂತನ ಮಂತ್ರಿಗಳ ತಮ್ಮ ಹಿಂದಿನ ಅನುಭವಿ ಸಚಿವರನ್ನು ಭೇಟಿ ಮಾಡಲು ಮತ್ತು ಅವರ ಅನುಭವದಿಂದ ಕಲಿಯಲು ಪ್ರಧಾನಿ ಹೇಳಿದರು. ಸಂಪುಟದ ಭಾಗವಾಗಿರದವರು ಕೂಡ ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದಲೂ ಹೊಸಬರು ಕಲಿಯಬಹುದೆಂದು ಪ್ರಧಾನಿ ಹೇಳಿದ್ದಾರೆ.
ಬೆಳಿಗ್ಗೆ 9.30 ರ ವೇಳೆಗೆ ಎಲ್ಲಾ ಸಚಿವರು ಸಮಯಪ್ರಜ್ಞೆಯೊಂದಿಗೆ ತಮ್ಮ ಕಚೇರಿಗಳನ್ನು ತಲುಪುವಂತೆ ಪ್ರಧಾನಿ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನೂತನ ಮಂತ್ರಿಗಳು ಜನರಲ್ಲಿ ಕರೊನಾ ಕುರಿತಾದ ಭಯವನ್ನು ಹುಟ್ಟುಹಾಕದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ವಿನಂತಿಸಬೇಕೆಂದು ನೂತನ ಸಚಿವರಿಗೆ ಪ್ರಧಾನಿ ಪಾಠ ಮಾಡಿದ್ದಾರೆ.(ಏಜೆನ್ಸೀಸ್​)
ಕೋವಿಡ್​ ವಿರುದ್ಧ ಹೋರಾಡಲು 23 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ​

ಸುಗಮವಾಗಿ ನಡೆಯಲಿ; ವರ್ಗಾವಣೆ ಪ್ರಕ್ರಿಯೆಗೆ ಕೊನೆಗೂ ಚಾಲನೆ..

ಶಿಕ್ಷಕರು ಧೈರ್ಯವಿತ್ತರೆ ಮಕ್ಕಳು ಧೀಮಂತರಾಗುತ್ತಾರೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eleven =
Remember me
