ಕೊಚ್ಚಿ:ಮಂಗಳ ದೋಷ ನಿವಾರಣೆ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬಳ ಬಳಿಯಿಂದ ಚಿನ್ನಾಭರಣ ದೋಚಿದ ಖದೀಮನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶ್ಯಾಮ್​ ಕುಮಾರ್​ (35) ಎಂದು ಗುರುತಿಸಲಾಗಿದೆ. ಈತ ಇಡುಕ್ಕಿಯ ವಂದನಮೇಡು ಮೂಲದ ನಿವಾಸಿ. ಅಂಬಾಲಪ್ಪುಳದ ಕರುಮಡಿ ಮೂಲದ ನಿವಾಸಿಯಿಂದ ಎರಡು ಸವರನ್​ ಚಿನ್ನವನ್ನು ಕಸಿದು ಪರಾರಿಯಾಗಿದ್ದಾನೆ.
ಐದು ತಿಂಗಳ ಹಿಂದೆ ನಡೆದಿರುವ ಘಟನೆ ಇದಾಗಿದೆ. ಆರೋಪಿ ಶ್ಯಾಮ್​ ಫೇಸ್​ಬುಕ್​ ಮೂಲಕ ಸಂತ್ರಸ್ತ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಆಕೆಯ ಕುಟುಂಬದೊಂದಿಗೂ ಸಹ ಸ್ನೇಹ ಸಂಬಂಧವನ್ನು ಹೊಂದಿದ್ದ. ಸಂತ್ರಸ್ತೆಗೆ ತುಂಬಾ ವರ್ಷಗಳಿಂದ ಮದುವೆ ಆಗಿರಲಿಲ್ಲ. ಯಾವುದೇ ಸಂಬಂಧ ಬಂದರೂ ಒಪ್ಪಿಗೆಯಾಗುತ್ತಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಆರೋಪಿ ಮಂಗಳ ದೋಷವಿದೆ. ಅದರ ನಿವಾರಣೆ ಮಾಡಲು ಪೂಜೆ ಮಾಡುತ್ತೇನೆ ಎಂದು ನಂಬಿಸಿದ್ದ.
ಪೂಜೆ ಮಾಡುವಾಗ ಸಂತ್ರಸ್ತೆಯ ಕಾಲಿನಲ್ಲಿದ್ದ ಚಿನ್ನದ ಸರವನ್ನು ಕಳಿಸಿಕೊಂಡಿದ್ದ. ಬಳಿಕ ಎರಡು ಸವರನ್​ ಚಿನ್ನದ ಸರದೊಂದಿಗೆ ಆರೋಪಿ ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆಯ ಕುಟುಂಬ ದೂರು ದಾಖಲಿಸಿತು. ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಇದೀಗ ಆರೋಪಿಯನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ.(ಏಜೆನ್ಸೀಸ್​)
ಕೊಪ್ಪಳದ ಮೆಟ್ರಿಕ್​ ಪೂರ್ವ ವಸತಿ ಶಾಲೆಯಲ್ಲಿ ಊಟ ಸೇವಿಸಿದ 20 ವಿದ್ಯಾರ್ಥಿನಿಯರಿಗೆ ವಾಂತಿ ಭೇದಿ…

ರಿಷಿ ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರಮೋಷನ್​ ಪಡೆದ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ

ರಾಜಕೀಯ ಕಿರುಕುಳ ಆರೋಪ: ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ಪ್ರಾಣಬಿಟ್ಟ ದೊಡ್ಡಬಳ್ಳಾಪುರದ ಬಿಜೆಪಿ ಕಾರ್ಯಕರ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + four =
Remember me
