ಮುಜಫ್ಫರ್​ಪುರ :ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ, 17 ವರ್ಷದ ಯುವಕನನ್ನು ಹುಡುಗಿಯ ಮನೆಯವರು ಥಳಿಸಿ ಸಾಯಿಸಿ, ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿರುವ ಭೀಕರ ಘಟನೆ ಬಿಹಾರದಿಂದ ವರದಿಯಾಗಿದೆ. ಮುಜಫ್ಫರ್​ಪುರ ಜಿಲ್ಲೆಯ ರೇಪುರ ರಾಮಪುರಷಾ ಗ್ರಾಮದ ನಿವಾಸಿಯಾಗಿದ್ದ ಸೌರಭ್ ಕುಮಾರ್ ಕೊಲೆಯಾದ ದುರ್ದೈವಿ.
ಜುಲೈ 23 ರ ರಾತ್ರಿ ಸೌರಭ್​ ಕುಮಾರ್​ ಪಕ್ಕದ ಸೊರ್ಬರ ಗ್ರಾಮದಲ್ಲಿನ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋಗಿದ್ದ. ಸರಿರಾತ್ರಿಯಲ್ಲಿ ಮನೆಗೇ ಪ್ರವೇಶ ಮಾಡಿದ ಆತನ ಬಗ್ಗೆ ಕೋಪಗೊಂಡ ಹುಡುಗಿಯ ಮನೆಯವರು ಅವನನ್ನು ನಿರ್ದಯವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಚಿತ್ರ ನಿರ್ಮಾಪಕನ​ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ
ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಆತ ಬದುಕುಳಿಯಲಿಲ್ಲ. ಕಾಂತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಶಂಕಿತ ಆರೋಪಿ ಸುಶಾಂತ್ ಪಾಂಡೆ ಎಂಬುವವನನ್ನು ಬಂಧಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಆತನ ಕುಟುಂಬದವರಿಗೆ ಒಪ್ಪಿಸಲಾಯಿತು.
ಈ ಘೋರ ಕೃತ್ಯದಿಂದ ನೋವುಂಡ ಮೃತನ ಕುಟುಂಬದವರು, ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಲ್ಲದೆ, ಮೃತನ ಅಂತ್ಯಕ್ರಿಯೆಯನ್ನು ಅವರ ಮನೆಯ ಎದುರಿಗೇ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಮೂವರು ಸಂಬಂಧಿಕರು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಉಂಟಾಗಿರುವ ಉದ್ರಿಕ್ತ ಪರಿಸ್ಥಿತಿಯಿಂದಾಗಿ ವಿಶೇಷ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.(ಏಜೆನ್ಸೀಸ್)
ದೇಶದ ಅತಿದೊಡ್ಡ ಗನ್​ ಲೈಸೆನ್ಸ್​ ಹಗರಣ ಬೆಳಕಿಗೆ! ಭರದಿಂದ ಸಾಗಿದೆ, ಸಿಬಿಐ ಕಾರ್ಯಾಚರಣೆ!

ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 4 =
Remember me
