ಹೈದರಾಬಾದ್​:ನಾನು ಕೋವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿದ್ದೇನೆ. ಪ್ಲಾಸ್ಮಾ ದಾನ ಮಾಡಲು ಸಿದ್ಧನಿದ್ದೇನೆ. ಅಷ್ಟೇ ಅಲ್ಲ, ಆ್ಯಂಟಿವೈರಲ್​ ಇಂಜೆಕ್ಷನ್​ ಟೊಚಿಲಿಜುಮಾಬ್​ 400 ಎಂಜಿ ಸೇರಿ ನೀವು ಕೇಳುವ ಆ್ಯಂಟಿವೈರಲ್​ ಚುಚ್ಚುಮದ್ದುಗಳನ್ನು ತಂದು ಕೊಡುತ್ತೇನೆ ಎಂದು ನಂಬಿಸಿ 200ಕ್ಕೂ ಹೆಚ್ಚು ಜನರನ್ನು ವಂಚಿಸಿದವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ಸಂದೀಪ್​ ರೆಡ್ಡಿ (25) ಬಂಧಿತ. ಆನ್​ಲೈನ್​ನಲ್ಲಿ ಪ್ಲಾಸ್ಮಾಕ್ಕಾಗಿ ಹುಡುಕಾಡುತ್ತಿರುವ ಕೋವಿಡ್​ ಸೋಂಕಿತರ ಸಂಬಂಧಿಕರು ಮತ್ತು ಆ್ಯಂಟಿವೈರಲ್​ ಚುಚ್ಚುಮದ್ದುಗಳಿಗಾಗಿ ಅರಸುತ್ತಿರುವವರನ್ನೇ ಗುರಿಯಾಗಿಸಿಕೊಂಡು ಸಂದೀಪ್​ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಊಟದ ಡಬ್ಬಿಯಲ್ಲಿ ಕಾಶ್ಮೀರ ಉಗ್ರರಿಗೆ ಬರುತ್ತಿದ್ದದ್ದು ಬುತ್ತಿಯಲ್ಲ… ಮತ್ತೇನು?
ಸಾಮಾಜಿಕ ಜಾಲತಾಣದಲ್ಲಿ ಪ್ಲಾಸ್ಮಾಕ್ಕಾಗಿ ಹುಡುಕಾಡುತ್ತಿರುವವರನ್ನು ಪ್ಲಾಸ್ಮಾ ದಾನಿಯಂತೆ ಹಾಗೂ ರೋಗನಿರೋಧಕ ಚುಚ್ಚುಮದ್ದುಗಳನ್ನು ಹುಡುಕುತ್ತಿರುವವರನ್ನು ಚುಚ್ಚುಮದ್ದುಗಳ ವಿತರಕನ ರೂಪದಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಸಂದೀಪ್​, ತಾನಿರುವ ಸ್ಥಳದಿಂದ ಪ್ಲಾಸ್ಮಾ ಬೇಕಾದವರು ಇರುವ ಸ್ಥಳಕ್ಕೆ ಬಂದು ಹೋಗುವ ಖರ್ಚುವೆಚ್ಚದ ನೆಪದಲ್ಲಿ ಹಾಗೂ ಪ್ಲಾಸ್ಮಾ ದಾನ ಮಾಡಿದ್ದಕ್ಕಾಗಿ ಶುಲ್ಕವೆಂದು ಮುಂಗಡವಾಗಿ ಹಣ ಪಡೆಯುತ್ತಿದ್ದ. ಅಂತೆಯೇ ಚುಚ್ಚುಮದ್ದು ಬೇಕಾದವರಿಂದ ಮುಂಗಡವಾಗಿಯೇ ಹಣಪಡೆದುಕೊಳ್ಳುತ್ತಿದ್ದ. ಆನ್​ಲೈನ್​ ಮೂಲಕ ಹಣ ಸೇರುತ್ತಿದ್ದಂತೆ ಮೊಬೈಲ್​ ಸ್ವಿಚ್​ಆಫ್​ ಮಾಡಿಕೊಂಡು ಮುಗಮ್ಮಾಗಿಬಿಡುತ್ತಿದ್ದ ಎಂದು ವಿವರಿಸಿದ್ದಾರೆ.
ಹೈದರಾಬಾದ್​ ಪೊಲೀಸ್​ನ ಹೆಚ್ಚುವರಿ ಡಿಸಿಪಿ ಜಿ. ಚಕ್ರವರ್ತಿಯವರ ಪ್ರಕಾರ ಸಂದೀಪ್​ ವಿಶಾಖಾಪಟ್ಟಣದಲ್ಲಿ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಜೈಲಿನಲ್ಲಿ ಕುಳಿತು ಕೋವಿಡ್​-19 ಪರಿಸ್ಥಿತಿಯ ಲಾಭ ಪಡೆಯಲು ಸಂಚು ರೂಪಿಸಿದ್ದ. ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ತನ್ನ ಯೋಜನೆಯನ್ನು ಜಾರಿಗೊಳಿಸಿ ಕನಿಷ್ಠ ಎಂದರೂ 20 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ವಂಚಿಸಿದ್ದಾನೆ ಎಂದು ಹೇಳಿದ್ದಾರೆ.
ವಾರ್ಡ್​ಬಾಯ್​ಗೆ ಕೊಡಲು 30 ರೂ. ಇಲ್ಲದ್ದಕ್ಕೆ ಸ್ಟ್ರೆಚರ್​ ದೂಡಿದ 6ರ ಬಾಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 20 =
Remember me
