ನವದೆಹಲಿ :ಕರೊನಾ ಪರಿಹಾರ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಇಂಡಿಯನ್ ಯೂತ್ ಕಾಂಗ್ರೆಸ್​(ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಅವರನ್ನು ದೆಹಲಿ ನಗರ ಅಪರಾಧ ವಿಭಾಗದ ಪೊಲೀಸರು ಇಂದು ವಿಚಾರಣೆ ಮಾಡಿದರು. ಕರೊನಾ ಔಷಧಿಗಳ ಕಾನೂನುಬಾಹಿರ ವಿತರಣೆಯ ಆರೋಪದ ಹಿನ್ನೆಲೆಯಲ್ಲಿ ನಗರದ ಐವೈಸಿ ಕಛೇರಿಗೆ ಹೋಗಿ ಶ್ರೀನಿವಾಸ್​ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು ಎನ್ನಲಾಗಿದೆ.
“ಡಾ.ದೀಪಕ್​ ಸಿಂಗ್ ಎಂಬುವರು ಕೋವಿಡ್ ಔಷಧಿಗಳ ಕಾನೂನುಬಾಹಿರ ವಿತರಣೆ ಮುಂತಾಗಿ ಸಲ್ಲಿಸಿರುವ ರಿಟ್​ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್​ ದೆಹಲಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ನ್ಯಾಯಾಲಯದ ಈ ನಿರ್ದೇಶನಗಳ ಪ್ರಕಾರ ಹಲವಾರು ಸಂಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ” ಎಂದು ದೆಹಲಿ ಪೊಲೀಸ್ ವಕ್ತಾರ ಚಿನ್ಮಯ್ ಬಿಸ್ವಲ್ ಹೇಳಿದ್ದಾರೆ.
ಇದನ್ನೂ ಓದಿ:ಕೆಲಸ ಮಾಡುವವರೇ ತಪ್ಪು ಮಾಡುವುದು : ಅನುಪಂ ಖೇರ್​ ಮಾರ್ಮಿಕ ನುಡಿ
ಹೃದಯ ಫೌಂಡೇಶನ್ ಎಂಬ ನಾನ್​ಪ್ರಾಫಿಟ್​ ಸಂಸ್ಥೆಯ ಅಧ್ಯಕ್ಷರಾಗಿರುವ ದೀಪಕ್ ಸಿಂಗ್​ ಅವರು, ಮೆಡಿಕಲ್ ಮಾಫಿಯ ಮತ್ತು ರಾಜಕಾರಣಿಗಳ ನಡುವೆ ನಂಟಿದ್ದು, ಕರೊನಾ ಔಷಧಿಗಳ ಅಕ್ರಮ ವಿತರಣೆಯಲ್ಲಿ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ದೂರಿ ಸಿಬಿಐ ತನಿಖೆ ಕೋರಿದ್ದರು. ಮೇ 4 ರಂದು ದೆಹಲಿ ಹೈಕೋರ್ಟ್​, ಈ ಬಗ್ಗೆ ಮೊದಲು ದೆಹಲಿ ಪೊಲೀಸ್ ಕಮಿಷನರ್​ಗೆ ದೂರು ಸಲ್ಲಿಸಬೇಕೆಂದು ಸೂಚಿಸಿತ್ತು ಎನ್ನಲಾಗಿದೆ.
ನಂತರದಲ್ಲಿ ಸಿಂಗ್​ ಅವರು, ಎಎಪಿ ಶಾಸಕ ದಿಲೀಪ್ ಪಾಂಡೆ, ಐಎನ್​ಸಿಯ ಬಿ.ವಿ.ಶ್ರೀನಿವಾಸ್, ಬಿಜೆಪಿ ಸಂಸದರಾದ ಗೌತಮ್​ ಗಂಭೀರ್​ ಮತ್ತು ಸುಜಯ್ ವೀಖೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ಶಾಸಕ ಮುಕೇಶ್ ಶರ್ಮ ಅವರ ಹೆಸರುಗಳನ್ನು ಬರೆದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೆಹಲಿ ಕಮಿಷನರ್​ ಎಸ್​.ಎನ್​.ಶ್ರೀವಾಸ್ತವ ಅವರು ಅಪರಾಧ ವಿಭಾಗದ ತಂಡವೊಂದಕ್ಕೆ ಈ ವಿಚಾರಣೆಯ ಜವಾಬ್ದಾರಿ ವಹಿಸಿದೆ. ಈ ಮುನ್ನ ಎಎಪಿ ಶಾಸಕ ದಿಲೀಪ್ ಪಾಂಡೆ ಅವರನ್ನು ಪೊಲೀಸ್ ತಂಡ ವಿಚಾರಣೆ ನಡೆಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಸೌದೆಗಾಗಿ ಮರ ಕಡಿಯಲು ಬಿಡೋಲ್ಲ ಎಂದು ಗ್ರಾಮಸ್ಥರ ಪ್ರತಿಭಟನೆ

ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
