ಹೈದರಾಬಾದ್​:ಹಾವಿನ ಸೆಲ್ಫಿ ತೆಗೆಯುವಾಗ ಹಾವು ಕಡಿದು ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
ಮೃತನನ್ನು ಮಣಿಕಂಠ ರೆಡ್ಡಿ (32) ಎಂದು ಗುರುತಿಸಲಾಗಿದೆ. ಮಣಿಕಂಠ ನೆಲ್ಲೂರಿನ ಕೋವೂರು ಜಂಕ್ಷನ್ ಬಳಿ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ನಿನ್ನೆ ಸಂಜೆ ಮಣಿಕಂಠ ಅವರ ಅಂಗಡಿಗೆ ಹಾವಾಡಿಗನೊಬ್ಬ ಬಂದಿದ್ದಾನೆ. ಈ ವೇಳೆ ತನ್ನ ಬಳಿ ಅನೇಕ ಹಾವುಗಳಿವೆ ಮತ್ತು ಅವು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದಾನೆ.
ಹಾವಾಡಿಗ ಹೇಳಿದ ಮಾತನ್ನು ನಂಬಿದ ಮಣಿಕಂಠ ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಹಾವಾಡಿಗ ತಕ್ಷಣವೇ ಹಾವುಗಳಲ್ಲಿ ಒಂದು ಹಾವನ್ನು ತೆಗೆದುಕೊಂಡು ಮಣಿಕಂಠನ ಕುತ್ತಿಗೆಗೆ ಹಾಕಿದನು. ಬಳಿಕ ಮಣಿಕಂಠ ಸೆಲ್ಫಿ ತೆಗೆಯುವಾಗ ಕೈಗೆ ಹಾವು ಕಚ್ಚಿದೆ. ಈ ಬಗ್ಗೆ ಮಣಿಕಂಠ ಹಾವಾಡಿಗನ ಬಳಿ ತಿಳಿಸಿದ್ದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾನೆ. ಇದಾದ ಸ್ವಲ್ಪ ಹೊತ್ತಿನ ನಂತರ ಮಣಿಕಂಠ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಣಿಕಂಠ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾನೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಹಾವುಗಳನ್ನು ಸೆರೆಹಿಡಿದು, ಪ್ರದರ್ಶಿಸುವ ಹಾವಾಡಿಗರ ಮೇಲೂ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಪೊಲೀಸ್​ ಗಸ್ತು ವಾಹನ ಡಿಕ್ಕಿ: ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿ ದುರಂತ ಸಾವು

PSI ಹೆಸರಲ್ಲಿ ಸರಸ ಸಲ್ಲಾಪ: ಇನ್​ಸ್ಟಾಗ್ರಾಂನಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಹುಬ್ಬಳ್ಳಿ ಹೈದ ಸಿಕ್ಕಿಬಿದ್ದಿದ್ದೇ ರೋಚಕ

ಗೊರಕೆ ನಿಲ್ಲಿಸುವ ಟೋಪಿ ಮಾರಾಟದ ನೆಪದಲ್ಲಿ ಗಾಳ: ಚೈನ್‌ಲಿಂಕ್ ವಂಚಕ ಕಂಪನಿಯ ನಾಲ್ವರ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
