ರಾಯ್​ಪುರ:ಕಲಾವಿದರು ತಮಗೆ ಸಿಗುವಂತಹ ವಸ್ತುಗಳನ್ನು ಇಟ್ಟುಕೊಂಡು ತಮ್ಮ ಕೈಚಳಕ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಕೆಲವರು ಮಣ್ಣಿನಲ್ಲಿ, ಕಲ್ಲು ಬಂಡೆ, ದಿನಸಿ ಪದಾರ್ಥ, ಬಾಲೆ ಎಳೆ ಮೇಲೆ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ತಾವು ಭಿನ್ನ ಎಂದು ತೋರ್ಪಡಿಸುತ್ತಾರೆ.
ಅದೇ ರೀತಿ ಇದೀಗ ಕಲಾವಿದರೊಬ್ಬರು, 100 ರೂ. ಮುಖಬೆಲೆಯ ನೋಟಿನ ಮೇಲೆ ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಕಲಾವಿದನ ಕೈಚಳಕಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
बापू ये क्या हो गया😭pic.twitter.com/glvF6qjJZC
ಇದನ್ನೂ ಓದಿ:ವಿಶ್ವಾಮತ ಗೆದ್ದ ನಿತೀಶ್​ ಕುಮಾರ್​; ಬಿಹಾರದಲ್ಲಿ ಎನ್​ಡಿಎ ಪಾರುಪತ್ಯ
ವೈರಲ್​ ಆಗಿರುವ ವಿಡಿಯೋದಲ್ಲಿ ಕಲಾವಿದನೊಬ್ಬ 100 ರೂಪಾಯಿ ಮುಖಬೆಲೆಯ ನೋಟನ್ನು ತೆಗೆದುಕೊಂಡು ಗಾಂಧೀಜಿ ಭಾವಚಿತ್ರವಿರುವ ಜಾಗಕ್ಕೆ ಬಿಳಿ ಕ್ಯಾನ್ವಸ್ ಪೇಂಟ್ ಹಚ್ಚಿ ನಂತರ ಶ್ರೀ ರಾಮಚಂದ್ರನ ಫೋಟೋವನ್ನು ಬಿಡಿಸುತ್ತಾರೆ. ಈ ಮೂಲಕ ಶ್ರೀ ರಾಮಚಂದ್ರನ ಮೇಲೆ ತಮ್ಮಗಿರುವ ಭಕ್ತಿಯನ್ನು ಕಲಾವಿದ ಪ್ರದರ್ಶಿಸಿದ್ದಾರೆ.
ಇತ್ತ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಮೆಂಟ್ಸ್​ ಮೂಲಕ ಕಲಾವಿದನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕಲಾವಿದನ ಕಾರ್ಯವನ್ನು ಮೆಚ್ಚಿದರೆ ಹಲವರು ನೋಟಿನ ಮೇಲೆ ಈ ರೀತಿ ಚಿತ್ರ ಬಿಡಿಸುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 3 =
Remember me
