ರಾಜಸ್ಥಾನ:ನೀರಿನ ಹೊಂಡಕ್ಕೆ ಬಿದ್ದ ಮೊಬೈಲ್​ಫೋನ್​ ಎತ್ತಿಕೊಳ್ಳಲು ನೀರಿಗೆ ಧುಮುಕಿದ ಯುವಕನೊಬ್ಬ, ಅದರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ರಾಜಸ್ಥಾನದ ಜೈಸಲ್ಮೇರ್​ನ ದರ್ಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸಯೀದ್ ಎಂಬ 25 ವರ್ಷದ ಯುವಕ ಮೃತಪಟ್ಟವ. ಈತ ನೀರಿನ ಹೊಂಡದ ಬಳಿ ಕೆಲಸಕ್ಕೆಂದು ಹೋಗಿದ್ದ. ಆಗ ಕಿಸೆಯಲ್ಲಿದ್ದ ಮೊಬೈಲ್​ಫೋನ್ ನೀರಿಗೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲೆಂದು ಈತ ನೀರಿಗೆ ಧುಮುಕಿದ್ದಾನೆ. ಆದರೆ ಈತ ಅಲ್ಲಿ ಮುಳುಗಲಾರಂಭಿಸಿದ್ದ.
ಸ್ಥಳೀಯರು ಕೂಡಲೇ ಅವನನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಈತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಬಳಿಕ ದೃಢಪಡಿಸಿದ್ದಾರೆ. ಈತ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದು, ಮೊಬೈಲ್​ಫೋನ್​ಗಾಗಿ ಪ್ರಾಣ ಕಳೆದುಕೊಂಡಂತಾಗಿದೆ.
ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

ಕೋವಿಡ್​ ಲಸಿಕೆಯಿಂದಾಗಿ ತಪ್ಪಿತು ಭಾರತದ 42 ಲಕ್ಷಕ್ಕೂ ಅಧಿಕ ಮಂದಿಯ ಸಾವು!; ಇಲ್ಲಿದೆ ಅಧ್ಯಯನ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + nine =
Remember me
