ಚೆನ್ನೈ:ಇತ್ತೀಚಿನ ದಿನಗಳಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಗೆ​ ಆಗುವ ಬಯಕೆಯಲ್ಲಿ ವಿವಿಧ ರೀತಿಯ ಕಸರತ್ತಿಗೆ ಮೊರೆ ಹೋಗುತ್ತಿದ್ದು ಸಾರ್ವಜನಿಕೆ ಸ್ಥಳಗಳಲ್ಲಿ ಇಲ್ಲಸಲ್ಲದ ಕೆಲಸ ಮಾಡುವ ಮೂಲಕ ಸುದ್ದಿಯಾಗುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟ್​ಗಳಿಗೆ ಹೆಚ್ಚಿನ ಲೈಕ್​ ಹಾಗೂ ವ್ಯೂವ್ಸ್ ಬರಲೆಂದು​​ ಗೀಳಿಗೆ ಬಿದ್ದ ಯುವಕ ಪೊಲೀಸರಿಗೆ 3,500 ಸಾವಿರ ರೂಪಾಯಿ ದಂಡ ತೆತ್ತಿರುವ ಘಟನೆ ತಮಿಳುನಾಡಿದ ಈರೋಡ್​ನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ವೇಳೆ ಯುವನೋರ್ವ ಟ್ರಾಫಿಕ್​ ಸಿಗ್ನಲ್​ನಲ್ಲಿ ನಿಂತಿರುವ ವೇಳೆ ದ್ವಿಚಕ್ರ ವಾಹನದ ಮೇಲೆ ಸ್ನಾನ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ಇನ್ಸ್​ಟಾಗ್ರಾಂನಲ್ಲಿ ತನ್ನ ರೀಲ್ಸ್​ಗೆ ಹೆಚ್ಚಿನ ಲೈಕ್ಸ್​ ಹಾಗೂ ವೀವ್ಸ್​​ಗಳು ಬರಲಿ ಎಂಬ ಕಾರಣಕ್ಕೆ ವೆಲ್ಲೋಡ್​ನ ಪಾರ್ತಿಬನ್ ಎಂಬ ಯುವಕ ಸಿಗ್ನಲ್​ನಲ್ಲಿ ನಿಂತಿರುವ ವೇಳೆ ಸ್ನಾನ ಮಾಡುವ ವಿಡಿಯೋವನ್ನು ಮಾಡಿದ್ದಾನೆ.
ಇದನ್ನೂ ಓದಿ:ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್​​ ಜನತೆಗೆ ಮೋಸ ಮಾಡುತ್ತಿದೆ: ಕೆ.ಎಸ್. ಈಶ್ವರಪ್ಪ
ಈತ ತನ್ನ ಇನ್ಸ್​​ಟಾಗ್ರಾಂನಲ್ಲಿ ರಸ್ತೆಯಲ್ಲಿ ಆಮ್ಲೆಟ್​ ತಯಾರಿಸುವುದು, ಬೇಯಿಸದ ಮೀನು ತಿನ್ನುವುದು, ನೀರಿನಲ್ಲಿ ಮೊಟ್ಟೆಯನ್ನು ಕಳಿಸಿಕೊಂಡು ಕುಡಿಯುವುದು, ಟ್ರಾಫಿಕ್​ ಜಾಮ್ನಲ್ಲಿ ಬಿರಿಯಾನಿ ಸೇವಿಸುವುದು, ರಾತ್ರಿ ಹೊತ್ತು ಬಾವಿಯಲ್ಲಿ ಸ್ನಾನ ಮಾಡುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾನೆ.
ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡುವುದಾಗಿ ತನ್ನ ಸ್ನೇಹಿತರ ಬಳಿ 10 ರೂಪಾಯಿ ಬೆಟ್ಟಿಂಗ್​ ಕಟ್ಟಿದ್ದ. ಅದರಂತೆ ಪಂದ್ಯದಲ್ಲಿ ಗೆದ್ದಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಆತನನ್ನು ಈರೋಡ್​ ಪೊಲೀಸ್​ ಠಾಣೆಗೆ ಕರೆಸಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಮತ್ತು ಹೆಲ್ಮೆಟ್​ ಧರಿಸದೆ ಸವಾರಿ ಮಾಡಿದ್ದಕ್ಕೆ 3,500 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
