ಭೋಪಾಲ್:ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಾಯಿಯ ಬೆಲ್ಟ್​ ಧರಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆಯೂ ಮಧ್ಯಪ್ರದೇಶದ ಜಮಲ್​ಪುರದ ಟೀಲಾ ಎಂಬ ಪ್ರದೇಶದಲ್ಲಿ ನಡೆದಿದ್ದು, ವೈರಲ್​ ಆಗಿರುವ ವಿಡಿಯೋದಲ್ಲಿ ದುಷ್ಕರ್ಮಿಗಳು ಯುವಕನಿಗೆ ನಾಯಿಯಂತೆ ವರ್ತಿಸಲು ಹೇಳುತ್ತಿರುವುದು ಕಂಡು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕ ತನ್ನ ಮೇಲೆ ಹಲ್ಲೆ ನಡೆಸದಂತೆ ದುಷ್ಕರ್ಮಿಗಳ ಬಳಿ ವಿನಂತಿಸುತ್ತಿರುವುದು ಕಂಡು ಬಂದಿದೆ. ಸಾಹಿಲ್ ಭಾಯ್ ನನ್ನ ತಂದೆ, ನನ್ನ ಅಣ್ಣ. ಫೈಜಾನ್ ಭಾಯ್ ನನ್ನ ಸಹೋದರ. ನನ್ನ ತಾಯಿ ಅವನ ತಾಯಿ, ಅವನ ತಾಯಿ ನನ್ನವರು ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಆಗ ಆರೋಪಿಗಳು ಯುವಕನಿಗೆ ನಾಯಿಯಂತೆ ಬೊಗಳಲು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್​ ನಾನು ಹಾಕಿದ್ದಲ್ಲ ಎಂದು ಯುವಕ ಗೋಗರೆಯಿತ್ತಿರುವುದು ಕಂಡು ಬಂದಿದೆ. ಬಳಿಕ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಮಲ್​ಪುರ ಪೊಲೀಸ್​ ಠಾಣಾಧಿಕಾರಿ ರಾಜ್​ಕಿಶೋರ್​ ಮಿಶ್ರಾ ಘಟನೆಯೂ ಭಾನುವಾರ ತಡರಾತ್ರಿ ನಡೆದಿದ್ದು, ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ.
ಹಲ್ಲೆಗೊಳಗಾದವರನ್ನು ವಿಜಯ್​ ಎಂದು ತಿಳಿದು ಬಂದಿದೆ. ಯುವಕನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಿಲಾಲ್ ಟೀಲಾ, ಫೈಜಾನ್ ಲಾಲಾ, ಸಾಹಿಲ್ ಬಚ್ಚಾ, ಮೊಹಮ್ಮದ್ ಸಮೀರ್ ಟೀಲಾ ಮತ್ತು ಮುಫೀದ್ ಖಾನ್ ಎಂದು ಗುರುತಿಸಲಾಗಿದೆ.
#भोपाल: एक युवक को गले में पट्टा पहनाकर उसे कुता बनाने का मामला,#वायरलहुआ#वीडियो, होम मिनिस्टर#नरोत्तम_मिश्राने#भोपाल_कमिश्नरको दिए 24 घंटे के भीतर जांच कर कार्रवाई के निर्देश, देखें#Video@bhopalcomm@drnarottammisra@DGP_MP@CP_Bhopal@MPPoliceDeptt#Bhopal…pic.twitter.com/aucYl1c8r8
ಇದನ್ನೂ ಓದಿ:ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ…ಫ್ರೀ ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಅಕ್ಕ-ತಂಗಿ!
ಹಲ್ಲೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಐವರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ದುಷ್ಕರ್ಮಿಗಳ ದಾಳಿಗೆ ತುತ್ತಾದ ಯುವಕ ವಿಜಯ್​ ಕಾಣೆಯಾಗಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಜಮಲ್​ಪುರ ಪೊಲೀಸ್​ ಠಾಣಾಧಿಕಾರಿ ರಾಜ್​ಕಿಶೋರ್​ ಮಿಶ್ರಾ ತಿಳಿಸಿದ್ಧಾರೆ .
ಹಲ್ಲೆಗೊಳಗಾದ ಯುವಕ ವಿಜಯ್​ ಕುಟುಂಬಸ್ಥರು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದು, ನನ್ನ ಮಗನನ್ನು ಬಲವಂತೆ ಇಸ್ಲಾಂ ಧರ್ಮಕ್ಕೆ ಆರೋಪಿಗಳು ಮತಾಂತರ ಮಾಡಲು ಯತ್ನಿಸಿದ್ದರು. ಮಾದಕದ್ರವ್ಯ, ಮಾಂಸಹಾರ ಸೇವನೆ, ಮನೆಯಲ್ಲಿ ಕಳ್ಳತನ ಮಾಡುವಂತೆ ಆರೋಪಿಗಳು ಒತ್ತೆ ಹೇರುತ್ತಿದ್ದರು.
ಈ ಸಂಬಂಧ ಹಲವು ಬಾರಿ ದೂರು ನೀಡಲು ಹೋದಾಗ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ವಾಪಸ್​ ಕಳುಹಿಸಿದ್ದರು. ಇದರಿಂದ ತೀವ್ರವಾಗಿ ಬೇಸತ್ತಿದ್ದ ವಿಜಯ್​ ಘಟನೆಯ ವಿಡಿಯೋವನ್ನು ತನ್ನ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎಂದು ಸಂತ್ರಸ್ತ ವಿಜಯ್​ ಕುಟುಂಬಸ್ಥರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
