ಬಂಕಾ:ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡಿದ್ದು, ಯುವಕನೊಬ್ಬ ಶಿಕ್ಷಕಿಯ ಹಣೆಗೆ ಕುಂಕುಮ ಇಡುವ ಮೂಲಕ ಬಲವಂತವಾಗಿ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ದೃಶ್ಯ ನೋಡಿದ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಘಟನೆ ಬಿಹಾರದ ಬಂಕಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಜಯಂತಿಗಳಿಗೆ ಸಾರ್ವತ್ರಿಕ ರಜೆ ರದ್ದುಗೊಳಿಸಬೇಕು : ಶಾಸಕ ಜಿ.ಟಿ. ದೇವೇಗೌಡ
ಶಾಲಾ ಶಿಕ್ಷಕಿಯನ್ನು ಆಕೆಯ ತಂದೆ ರಕ್ಷಣೆ ಮಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದ್ದು, ಆಕೆಯ ಅಪ್ಪನ ಮುಂದೆಯೇ ಮಹಿಳೆಯನ್ನು ಬಲವಂತವಾಗಿ ಮದುವೆಯಾಗಲು ಯುವಕ ಯತ್ನಿಸಿದ್ದಾನೆ. ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಎಂದು ಶಿಕ್ಷಕಿ ಆರೋಪಿಸಿದ್ದು, ಆತನ ವಿರುದ್ಧ ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಂಕಾ ಜಿಲ್ಲೆಯ ಅಮರಪುರ ಬ್ಲಾಕ್​ನಲ್ಲಿ ಘಟನೆ ಸಂಭವಿಸಿದ್ದು, ಶಾಲೆ ಮುಗಿಸಿ ತನ್ನ ತಂದೆಯೊಂದಿಗೆ ಮನೆಗೆ ಹಿಂತಿರುಗುವ ಸಮಯ ನೋಡಿ ಯುವಕ ಶಿಕ್ಷಕಿ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಬಂದ ಯುವಕ, ಮಹಿಳೆಯ ಹಣೆಗೆ ಬಲವಂತವಾಗಿ ಸಿಂಧೂರ ಇಡಲು ಪ್ರಯತ್ನಿಸಿದ್ದಾನೆ. ಆದರೆ, ಮಗಳನ್ನು ಮುಟ್ಟದಂತೆ ಯುವಕನನ್ನು ತಡೆದ ಆಕೆಯ ತಂದೆ, ಹೊಡೆಯಲು ಕೂಡ ಯತ್ನಿಸಿದ್ದಾರೆ. ಈ ಘಟನೆಯನ್ನು ಆರೋಪಿಯ ಸ್ನೇಹಿತ ತನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿ, ತದನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಇದನ್ನೂ ಓದಿ:ಯುಜಿಸಿ-ನೆಟ್ ಅವ್ಯವಹಾರ ತನಿಖೆಗೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಶಾಲೆಯಿಂದ ಮನೆಗೆ ತೆರಳುವಾಗ ಆಗಾಗ್ಗೆ ಈ ರೀತಿ ಹಿಂಸಿಸುತ್ತಿದ್ದ. ಎಷ್ಟೇ ಬಾರಿ ಎಚ್ಚರಿಸಿ, ಕಳುಹಿಸಿದರೂ ಸಹ ಪದೇ ಪದೇ ಮಾನಸಿಕವಾಗಿ ಪೀಡಿಸುತ್ತಿದ್ದ ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಸದ್ಯ ದೂರು ದಾಖಲಿಸಿರುವ ಮಹಿಳೆ, ನ್ಯಾಯಕ್ಕಾಗಿ ಕಾಯುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).
ಅದೃಷ್ಟ ಇರುವುದು ಇವರ ಕಡೆ! ಸೆಮಿಫೈನಲ್ ಗೆಲುವು ಬಹಳ ಸುಲಭ: ಭವಿಷ್ಯ ನುಡಿದ ಅಂಬಟಿ ರಾಯುಡು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 13 =
Remember me
