ಭೋಪಾಲ್​:ಗಿರಣಿ ಕಾರ್ಖಾನೆಯನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್​ ಬಿಲ್​ ಕಟ್ಟಲಾಗದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತರ್​ಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮೊದಲು ಆತ ಪ್ರಧಾನಿ ನರೇಂದ್ರ ಮೋದಿಯವರಿಗೆ ಏಳು ಪುಟಗಳ ಡೆತ್​ ನೋಟ್​ ಬರೆದಿಟ್ಟಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಹೊಸ ವರ್ಷಕ್ಕೆ ಮದ್ಯದ ವಹಿವಾಟು ಜೋರು: 4 ದಿನದಲ್ಲಿ ಅಬಕಾರಿ ಇಲಾಖೆಗೆ ಹರಿದುಬಂತು ಭಾರಿ ಮೊತ್ತ!
ಮುನೇಂದ್ರ ರಾಜ್​ಪುತ್​ ಗಿರಣಿ ಕಾರ್ಖಾನೆಯನ್ನು ನಡೆಸುತ್ತಾನೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಆತನಿಗೆ ನಷ್ಟವುಂಟಾಗಿದ್ದು, ಕಳೆದ ಕೆಲ ತಿಂಗಳಿನಿಂದ ವಿದ್ಯುತ್​ ಬಿಲ್ ಕಟ್ಟಲಾಗಲಿಲ್ಲವಂತೆ. ಸುಮಾರು 80 ಸಾವಿರ ರೂಪಾಯಿ ವಿದ್ಯುತ್​ ಬಿಲ್​ ಬಾಕಿಯಿದೆಯಂತೆ. ಅದೇ ಕಾರಣಕ್ಕೆ ವಿದ್ಯುತ್​ ನಿಗಮದ ಅಧಿಕಾರಿಗಳು ಕಾರ್ಖಾನೆಗೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದಾರೆ. ಅದರೊಂದಿಗೆ ಊರವರ ಎದುರಿಗೆ ಮುನೇಂದ್ರಗೆ ಅವಮಾನಿಸಿದ್ದಾರಂತೆ.
ಅದರಿಂದಾಗಿ ಮನನೊಂದ ಆತ ತನ್ನ ಕಾರ್ಖಾನೆಯ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.ಪ್ರಧಾನಿ ಮೋದಿಯವರೇ ನನಗೆ ನಿಮ್ಮ ಬಗ್ಗೆ ಗೌರವವಿದೆ. ನಿಮ್ಮ ಸರ್ಕಾರ ಅದ್ಭುತ ಕೆಲಸಗಳನ್ನು ಮಾಡಿದೆ. ಆದರೆ ಕೆಳ ಮಟ್ಟದಲ್ಲಿರುವ ಅಧಿಕಾರಿಗಳು ಬಡವರ ಬದುಕನ್ನು ಇನ್ನಷ್ಟು ಬರಡು ಮಾಡುತ್ತಿದ್ದಾರೆ. ವಿದ್ಯುತ್​ ನಿಗಮದ ಅಧಿಕಾರಿಗಳ ಟಾರ್ಚರ್​ನಿಂದಾಗೇ ನಾನಿಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.
ಇದನ್ನೂ ಓದಿ:ನಾಳೆಯಿಂದ ಈ ಫೋನುಗಳಲ್ಲಿ ವಾಟ್ಸ್​ಆ್ಯಪ್​ ವರ್ಕ್​ ಆಗಲ್ಲ! ಕಾರಣವೇನು ಗೊತ್ತಾ?
ನನ್ನ ಮೃತ ದೇಹವನ್ನು ನಿಗಮದ ಅಧಿಕಾರಿಗಳಿಗೆ ಕೊಡಿ. ಬಳಕೆಗೆ ಬರುವ ಅಂಗಾಂಗಳನ್ನು ಮಾರಿಕೊಂಡು ಅವರು ವಿದ್ಯುತ್​ ಬಿಲ್​ ತುಂಬಿಸಿಕೊಳ್ಳಲಿ ಎಂದು ಆತ ಹೇಳಿಕೊಂಡಿದ್ದಾನೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)
ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
