ಕೊಲ್ಲಂ:ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಸುಬೀರ್​ ಎಂದು ಗುರುತಿಸಲಾಗಿದೆ. ಈತ ಪೂತಕ್ಕುಳಂ ಪರವೂರ್​ ಮೂಲದ ನಿವಾಸಿ.
ಪ್ರಕರಣವೊಂದರಲ್ಲಿ ಬಂಧಿಯಾಗಿರುವ ಪತಿಯನ್ನು ಬಿಡುಗಡೆ ಮಾಡಲು ಗರ್ಭಿಣಿಗೆ ಸಹಾಯ ಮಾಡುವುದಾಗಿ ಆರೋಪಿ ಸುಬೀರ್​ ಮುಂದೆ ಬಂದನು. ಆತನನ್ನು ಸಂತ್ರಸ್ತ ಗರ್ಭಿಣಿ ನಂಬಿದ್ದಳು. ಆದರೆ, ಆಕೆಯ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಸುಬೀರ್​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದನ್ನೂ ಓದಿ:ಸುರಕ್ಷಿತ ಕ್ಷೇತ್ರಕ್ಕಾಗಿ ಕಾಂಗ್ರೆಸ್​ ನಾಯಕರ ತಲಾಷೆ: BJP ರಾಜ್ಯ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಗೇಲಿ
ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ತೆಗೆದುಕೊಂಡು, ಅತ್ಯಾಚಾರದ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸಂತ್ರಸ್ತೆ ಜತೆ ಆತ್ಮೀಯತೆ ಬೆಳೆಸಿಕೊಂಡ ಆರೋಪಿ ಸುಬೀರ್​, ಸೇವಾ ಸಹಕಾರಿ ಬ್ಯಾಂಕ್​ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಗೊಮ್ಮೆ ಈಗೊಮ್ಮೆ 10 ಲಕ್ಷ ರೂ. ಸುಲಿಗೆ ಮಾಡಿದ್ದಾನೆ. ಉದ್ಯೋಗ ಸಂದರ್ಶನದ ನೆಪದಲ್ಲಿ ಆಕೆಯನ್ನು ಎರ್ನಾಕುಲಂನ ಹೋಟೆಲ್‌ಗೆ ಕರೆದೊಯ್ದು ಆಕೆ ಗರ್ಭಿಣಿ ಎಂದು ತಿಳಿದಿದ್ದರೂ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ.(ಏಜೆನ್ಸೀಸ್)
ನ್ಯಾಯಾಂಗದ ಕುರಿತು ಟೀಕೆ; ಲಲಿತ್​ ಮೋದಿಗೆ ಸುಪ್ರೀಂ ಕೋರ್ಟ್​ ಛೀಮಾರಿ

VIDEO | ಸಿಎಂ ಜಗನ್‌ ಪೋಸ್ಟರ್‌ ಕಿತ್ತು ತೆಗೆದ ನಾಯಿ ವಿರುದ್ಧ ದೂರು ದಾಖಲು!

ಮಲೆನಾಡಿನಲ್ಲಿ ವಾಮಾಚಾರದ ಆತಂಕ; ಸ್ಥಳದಲ್ಲಿ ಜೀವಂತ ಕುರಿ,ಅರಿಷಿಣ-ಕುಂಕುಮ, ಗೊಂಬೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
