ತ್ರಿಸ್ಸೂರ್​:ಹೇಳಿದ ಸಮಯಕ್ಕೆ ಎಬ್ಬಿಸದೇ ತಡವಾಗಿ ಎದ್ದೇಳಿಸಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ತಂದೆಯನ್ನು ಕೊಡನ್ನೂರು ಅರಿಯಂಪದಂ ಮೂಲದ ಜಾಯ್​ (60) ಎಂದು ಗುರುತಿಸಲಾಗಿದೆ. ಜಾಯ್​ ಪುತ್ರ ಆರೋಪಿ ರಿಜೋ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:‘ನಂದಿನಿ ಎಂಬ ಹಸುವಿನ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ’: ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್​ನಿಂದ ಗಂಭೀರ ಆರೋಪ!
ಆರೋಪಿ ರಿಜೋ ವೆಲ್ಡಿಂಗ್​ ಕೆಲಸ ಮಾಡುತ್ತಿದ್ದ. ನಿನ್ನೆ (ಏ.7) 5 ಗಂಟೆಗೆ ಪಾನಮತ್ತ ಸ್ಥಿತಿಯಲ್ಲಿ ಮನೆಗೆ ತಲುಪಿದ. ಮಲಗಲು ಹೋಗುವ ಮುನ್ನ ರಾತ್ರಿ 8.30ಕ್ಕೆ ಏಳಿಸಿ ಎಂದು ಪಾಲಕರಿಗೆ ಹೇಳಿ ಹೋಗಿದ್ದ. ಆದರೆ, ತಡವಾಗಿ ಎಬ್ಬಿಸಿದ್ದಕ್ಕೆ ಪಾಲಕರ ಮೇಲೆ ಕೋಪ ಮಾಡಿಕೊಂಡು ಕೂಗಾಡಿದ್ದ.
ಮಗನನ್ನು ಜಾಯ್ ಪ್ರಶ್ನಿಸಿದಾಗ, ರಿಜೋ ಅವರ ಮೇಲೆ ಜೋರು ಧ್ವನಿ ಮಾಡಿ ಕೆಳಗೆ ತಳ್ಳಿದ್ದಾನೆ. ಕೆಳಗೆ ಬಿದ್ದ ಜಾಯ್​, ಮೇಲೆ ಮಗ ಮಾರಣಾಂತಿಕವಾಗಿ ಹಲ್ಲೆ ಮಾಡಿದ. ಗಂಭೀರವಾಗಿ ಗಾಯಗೊಂಡಿದ್ದ ಜಾಯ್​ರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.(ಏಜೆನ್ಸೀಸ್​)
ಬರೋಬ್ಬರಿ ಒಂದೂವರೆ ಕೋಟಿ ರೂ. ಮೌಲ್ಯದ ತವಾ ಕುಕ್ಕರ್ ವಶಕ್ಕೆ!

ಮೊದಲ ಬಾರಿಗೆ ಫೈಟರ್​ ಜೆಟ್​ ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಮೋದಿ ಜತೆಗೆ ಕಾಣಿಸಿಕೊಂಡ ಅಭಿಷೇಕ್​ ಅಂಬರೀಷ್​; ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
