ತ್ರಿಸ್ಸೂರ್​:ಹೆಂಡತಿ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬ ತನ್ನಿಬ್ಬರು ಮಕ್ಕಳು ಸಮೇತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ. ಅದೃಷ್ಟವಶಾತ್ ಸ್ಥಳೀಯರು ಹಾಗೂ ಸಂಬಂಧಿಕರ ನೆರವಿನಿಂದ​ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ತ್ರಿಸ್ಸೂರ್​ನ ಮೂನುಪೀಡಿಕಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 5.30ರಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶಿಹಾಬ್​ (35) ಎಂದು ಗುರುತಿಸಲಾಗಿದೆ. ಹಣಕಾಸು ವಿಚಾರವಾಗಿ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಜಗಳದಿಂದ ತೀವ್ರವಾಗಿ ಮನನೊಂದಿದ್ದ ಶಿಹಾಬ್​, ತನ್ನ ಎರಡೂವರೆ ಹಾಗೂ ನಾಲ್ಕೂವರೆ ವರ್ಷದ ಇಬ್ಬರು ಮಕ್ಕಳ ಸಮೇತ ಮನೆಯ ಸಮೀಪದಲ್ಲೇ ಇದ್ದ ಬಾವಿಗೆ ಹಾರಿದನು.
ಬಾವಿಗೆ ಹಾರಿದ ಕೂಡಲೇ ಸ್ಥಳೀಯರು ಮತ್ತು ಸಂಬಂಧಿಕರು ರಕ್ಷಣೆಗೆ ಧಾವಿಸಿ ಮಕ್ಕಳಿಬ್ಬರನ್ನು ರಕ್ಷಿಸಿದರು. ಆದರೆ, ಶಿಹಾಬ್​ ಮೇಲೆತ್ತಲು ಸಾಧ್ಯವಾಗಲಿಲ್ಲ. ಘಟನೆಯ ಬೆನ್ನಲ್ಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಿಹಾಬ್​ನನ್ನು ಬಾವಿಯಿಂದ ಹೊರ ತೆಗೆದು, ಕೊಡುಂಗಲ್ಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದಾದರೂ ಆತ ಬದುಕುಳಿಯಲಿಲ್ಲ.
ಶಿಹಾಬ್​ ಅವರು ಚೆಂಥ್ರಪಿನಿಯಲ್ಲಿ ಟೈಲ್​ ಶಾಪ್​ ಒಂದನ್ನು ನಡೆಸುತ್ತಿದ್ದರು. ಜೀವನದಲ್ಲಿ ಯಾವುದೇ ಗಂಭೀರವಾದ ತೊಂದರೆ ಇರಲಿಲ್ಲ ಎಂದು ಹೇಳಲಾಗಿದೆ. ಆದರೂ ಶಿಹಾಬ್​ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.(ಏಜೆನ್ಸೀಸ್​)
ಜೆಡಿಎಸ್ ತೊರೆದು ಬಿಜೆಪಿ ಸೇರಲು ನನಗೆ ಯಡಿಯೂರಪ್ಪ-ವಿಜಯೇಂದ್ರ ಹಣ ಕೊಡಲು ಬಂದಿದ್ರು: ವಿಶ್ವನಾಥ್​ ಸ್ಫೋಟಕ ಹೇಳಿಕೆ

85 ವರ್ಷದಿಂದ ಮನೆಯಲ್ಲಿ ಆತ್ಮಗಳು ನೆಲೆಸಿವೆ ಎಂದು ನಂಬಿಸಿ ಐವರು ಮಂತ್ರವಾದಿಗಳಿಂದ ಮಹಾವಂಚನೆ!

ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಮಾಡಿದ ವಿಜಯಪುರದ 7 ಯುವಕರ ವಿರುದ್ಧ ದೂರು ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
