ಮುಂಬೈ:ಕೆಲವರು ತಮಗೆ ತಾವೇ ವಿಚಿತ್ರವಾಗಿ ಅಂತ್ಯ ಹೇಳಿಕೊಳ್ಳುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಲ್ಲೊಂದು ಕಡೆ ನಡೆದಿದ್ದು, ಯುವಕನೊಬ್ಬ ತನಗೇ ತಾನೇ ವಾಟ್ಸ್​ಆ್ಯಪ್​ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿಕೊಂಡಿದ್ದ. ವಿಚಿತ್ರವೆಂದರೆ ಆತ ಹಾಗೆ ಸ್ಟೇಟಸ್ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ ಆತನ ಶವ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನೇರಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಇನ ರಿಷಿಕೇಶ್ ದಿಲಿಪ್​ ಖೊಡ್ಪೆ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಟುಂಬಸ್ಥರ ಜತೆ ನೆಲೆಸಿದ್ದ ಈತ ಶನಿವಾರ ರಾತ್ರಿ 9ರ ಹಾಗೆ ಮೂಡ್ ಆಫ್​ ಅಂತ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ.
ಮರುದಿನ ತನಗೆ ತಾನೇ ಶ್ರದ್ಧಾಂಜಲಿ ಹೇಳಿಕೊಳ್ಳವಂತೆ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಈತ, ನಂತರ ತನ್ನ ಕಸಿನ್ ಪ್ರದೀಪ್ ಖೊಡ್ಪೆಗೆ ಕರೆ ಮಾಡಿ, ನಿನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದ. ಎಲ್ಲಿದ್ದಿಯಾ ಎಂದು ಪ್ರದೀಪ್ ಕೇಳಿದಾಗ ಗೋರಖ್ ಬಾಬಾ ಫಾರ್ಮ್​ನಲ್ಲಿದ್ದೇನೆ ಎಂದಿದ್ದ. ಕೂಡಲೇ ಪ್ರದೀಪ್ ಅಲ್ಲಿಗೆ ಹೋದರೆ ಅಲ್ಲಿನ ಮರವೊಂದರಲ್ಲಿ ರಿಷಿಕೇಶ್ ನೇಣು ಹಾಕಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

20 ತಿಂಗಳ ಮಗುವನ್ನೂ ಬಿಡದ ಕಾಮುಕ; ನೆರೆಮನೆಯವನಿಂದಲೇ ಹೀನಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 2 =
Remember me
