ನವದೆಹಲಿ:ರಸ್ತೆಯಲ್ಲಿ ಅಪಘಾತದ ಎಸಗಿದವರನ್ನು ಪೊಲೀಸ್​ ಅಧಿಕಾರಿ ಎಂದು ಬೆದರಿಸಿ ಓಡಿಸಿದ ಆತ, ಪ್ರತೀಕಾರ ತೀರಿಸಿಕೊಳ್ಳಲೆಂದು ಅಪಘಾತ ಎಸಗಿದವರ ವಿರುದ್ಧ ನಕಲಿ ದರೋಡೆ ಪ್ರಕರಣ ದಾಖಲಿಸಿದ್ದ. ಆದರೆ, ತನಿಖೆ ಆರಂಭಿಸಿದ ಪೊಲೀಸರಿಗೆ ಈತನ ಬಗ್ಗೆ ಅನುಮಾನ ಮೂಡಿ ಆತನ ಕೈಗೆ ಕೋಳ ತೊಡಿಸಿದ್ದಾರೆ.
ನಾಂಗ್ಲೋಯಿ ನಿವಾಸಿ, ಮನೆಪಾಠ ಮಾಡುವ ಪಂಕಜ್​ ಲಾಕ್ರಾ (25) ಬಂಧಿತ. ಏಕಮುಖ ಸಂಚಾರ ಇದ್ದರೂ, ವಿರುದ್ಧ ದಿಕ್ಕಿನಿಂದ ಬಂದ ಕಾರಿನಲ್ಲಿದ್ದ ನಾಲ್ವರು ಯುವಕರೊಂದಿಗೆ ಪಂಕಜ್​ ಸಿಂಗೋಲಾ ವೃತ್ತದಲ್ಲಿ ಜಗಳವಾಡಿದ್ದ. ಸ್ವತಃ ತಾನೆ ಇಬ್ಬರು ಯುವಕರಿಗೆ ಹೊಡೆದಿದ್ದಲ್ಲದೆ, ತಾನು ಪೊಲೀಸ್​ ಅಧಿಕಾರಿ ಎಂದು ಬೆದರಿಸಿದ್ದ. ಹೆದರಿದ ಆ ಯುವಕರು ಸುಮ್ಮನೆ ಹೊರಟು ಹೋಗಿದ್ದರು.
ಇದನ್ನೂ ಓದಿ:ಐಎಎಸ್​ ಅಧಿಕಾರಣಿ ಪತ್ನಿಯ ಕೊಲ್ಲಲು ಯತ್ನಿಸಿ ಜೈಲು ಸೇರಿದ ಕಾರ್ಮಿಕ ಇಲಾಖೆ ಆಯುಕ್ತ
ಆದರೆ, ಏಕಮುಖ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದವರ ವಿರುದ್ಧ ಪ್ರತೀಕಾರ ತೀರಿಸಿಕೊಂಡು, ಅವರಿಗೆ ತಕ್ಕುದಾಗಿ ಪಾಠ ಕಲಿಸಬೇಕು ಎಂದು ನಿರ್ಧರಿಸಿದ ಪಂಕಜ್​, ಒಂದಷ್ಟು ನಗದು ಮತ್ತು ಚಿನ್ನಾಭರಣವಿದ್ದ ಬ್ಯಾಗ್​ನೊಂದಿಗೆ ಶನಿವಾರ ಸಂಜೆ 5 ಗಂಟೆಯಲ್ಲಿ ನನ್ನ ಕಾರಿನಲ್ಲಿ ಬರುತ್ತಿದ್ದೆ. ಆಲಿಪುರ ಪ್ರದೇಶದಲ್ಲಿ ಎದುರಿನಿಂದ ಮತ್ತೊಂದು ಕಾರಿನಲ್ಲಿ ಬಂದ ನಾಲ್ವರು ಯುವಕರು ನನ್ನ ಕಾರು ಅಡ್ಡಗಟ್ಟಿ, ನಗದು ಮತ್ತು ಚಿನ್ನಾಭರಣದ ಬ್ಯಾಗ್​ ದೋಚಿದರು. ಆಗ ಇಬ್ಬರು ಯುವಕರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇನ್ನಿಬ್ಬರು ಬ್ಯಾಗ್​ ಎತ್ತಿಕೊಂಡರು. ನನ್ನನ್ನು ಹಿಡಿದುಕೊಂಡವರು ಹೋಗುವಾಗ ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನೂ ಕದ್ದುಕೊಂಡು ಹೋದರು ಎಂದು ಪೊಲೀಸರಿಗೆ ಕೊಟ್ಟಿದ್ದ ದೂರಿನಲ್ಲಿ ಪಂಕಜ್​ ವಿವರಿಸಿದ್ದ.
ಈ ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲಿಸರಿಗೆ ಆರಂಭಿಕ ಹಂತದಲ್ಲೇ ಇದೊಂದು ಸುಳ್ಳು ದೂರು ಎಂಬುದು ಸ್ಪಷ್ಟವಾಗಿತ್ತು. ಆದರೂ, ಆತನ ಕಟ್ಟುಕಥೆ ನಂಬಿದವರಂತೆ ವರ್ತಿಸುತ್ತಾ, ಆತನನ್ನೇ ವಶಕ್ಕೆ ಪಡೆದ ಅವರು, ಆತನ ಬಾಯಿಂದಲೇ ಸತ್ಯಾಂಶವನ್ನು ಹೊರಹಾಕಿಸಿದ್ದಾರೆ. ಆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 16 =
Remember me
