ಕೊಚ್ಚಿ:ಹಾಸ್ಟೆಲ್​ ಬಾತ್​ರೂಮ್​ನಲ್ಲಿ ಮಗುವಿಗೆ ಜನ್ಮ ನೀಡಿದ ಯುವತಿಯನ್ನು ಮದುವೆ ಮಾಡಿಕೊಳ್ಳಲು ಯುವಕನೊಬ್ಬ ಮುಂದೆ ಬಂದಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಯುವತಿಯನ್ನು ಮದುವೆಯಾಗಲು ಕೊಲ್ಲಂ ಮೂಲದ ಯುವಕ ಮುಂದೆ ಬಂದಿದ್ದಾನೆ ಮತ್ತು ಮಗುವಿನ ತಂದೆಯಾಗಲು ಒಪ್ಪಿಕೊಂಡಿದ್ದಾನೆ. ನಿನ್ನೆ ಕೊಚ್ಚಿ ಪೊಲೀಸರು ಯುವಕ ಮತ್ತು ಯುವತಿಯ ವಿವರವಾದ ಹೇಳಿಕೆಯನ್ನು ಸಂಗ್ರಹಿಸಿದ್ದಾರೆ. ಇಬ್ಬರ ಕುಟುಂಬಕ್ಕೂ ಇವರಿಬ್ಬರ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ಆದರೆ, ಯುವತಿ ಮಗುವಿಗೆ ಜನ್ಮ ನೀಡಿದ ಕೂಡಲೇ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಮದುವೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
23 ವರ್ಷದ ಯುವತಿ ಭಾನುವಾರ (ಮೇ 5) ಬೆಳಗ್ಗೆ ಓಲ್ಡ್ ಮಾರ್ಕೆಟ್ ರಸ್ತೆಯ ಮಹಿಳಾ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದಳು. ಹಾಸ್ಟೆಲ್​ನಲ್ಲಿ ಯುವತಿಯು ಇತರೆ ಆರು ಯುವತಿಯರೊಂದಿಗೆ ಒಂದೇ ರೂಮಿನಲ್ಲಿ ವಾಸವಿದ್ದರೂ ಆಕೆಯ ಗರ್ಭಧಾರಣೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಕೆಲವೊಮ್ಮೆ ಆಕೆ ದೈಹಿಕವಾಗಿ ಅಸ್ವಸ್ಥಗೊಂಡಾಗ ಸಹವಾಸಿಗಳು ಆಕೆಯ ಆರೋಗ್ಯವನ್ನು ವಿಚಾರಿಸಿದ್ದರು. ಆದರೆ. ತನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?ಹಾಸ್ಟೆಲ್​ನ ಬಾತ್​ರೂಮ್​ಗೆ ಹೋದ ಯುವತಿ, ಬಹಳ ಹೊತ್ತಿನವರೆಗೆ ಹಿಂತಿರುಗಲಿಲ್ಲ. ಈ ವೇಳೆ ಆಕೆಯ ಸ್ನೇಹಿತರು ಎಷ್ಟೇ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಬಲವಂತವಾಗಿ ಬಾತ್​ರೂಮ್​ ಬಾಗಿಲು ತೆರೆಯಲಾಯಿತು. ಈ ವೇಳೆ ಯುವತಿ ತನ್ನ ಮಗುವಿನೊಂದಿಗೆ ಇರುವುದನ್ನು ಕಂಡು ಸ್ನೇಹಿತರೇ ಒಂದು ಕ್ಷಣ ಶಾಕ್​ ಆದರು. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಯುವಕನೊಬ್ಬ ಆಕೆಯನ್ನು ಮದುವೆಯಾಗುವುದಾಗಿ ಮುಂದೆ ಬಂದಿದ್ದಾನೆ. ಇಬ್ಬರು ಪ್ರೀತಿಸುತ್ತಿದ್ದರು ಮತ್ತು ದೈಹಿಕ ಸಂಬಂಧ ಬೆಳೆಸಿದ್ದರು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಸ್ನಾನ ಮಾಡುವಾಗ ಈ ಒಂದು ಸಿಂಪಲ್​ ಟ್ರಿಕ್​ ಪಾಲಿಸಿದರೆ ಸಾಕು ಕೂದಲು ಉದುರುವುದೇ ಇಲ್ಲ!

ಗಂಡನಿಂದ ಡಿವೋರ್ಸ್ ಪಡೆಯಲು​ ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್​!

ನಿನಗೆ ಯಾವ ಬೂಟಿನಲ್ಲಿ ಹೊಡೆಯಲಿ ಎಂದು ಕೇಳಿದ ನೆಟ್ಟಿಗನಿಗೆ ನಟಿ ರಶ್ಮಿ ಕೊಟ್ಟ ಉತ್ತರ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
