ಕೊಚ್ಚಿ:ಕೇರಳದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಲಯಾಳಂ ನಟಿ ಹಾಗೂ ಮಾಡೆಲ್​ಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪದ ಮೇಲೆ 27 ವರ್ಷದ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸಾವದ್​ ಎಂದು ಗುರುತಿಸಲಾಗಿದೆ. ಈತ ಕೋಯಿಕ್ಕೊಡ್​ನ ಕಯಾಕೋಡಿ ನಿವಾಸಿ. ಬಂಧಿತನಿಗೆ 14 ದಿನಗಳ ರಿಮ್ಯಾಂಡ್​ನಲ್ಲಿ ಇರಿಸಲಾಗಿದೆ. ಬಸ್​ನಿಂದ ಇಳಿದು ತಪ್ಪಿಸಿಕೊಂಡು ಓಡುವಾಗ ಸ್ಥಳೀಯರು ಮತ್ತು ಬಸ್​ ಸಿಬ್ಬಂದಿ ಬೆನ್ನಟ್ಟಿ ಹೋಗಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ:ಕೈ ತಪ್ಪಿದ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದ ಜಿ.ಪರಮೇಶ್ವರ್; ಹೈಕಮಾಂಡ್ ಜತೆ ಚರ್ಚಿಸಲು ಸಧ್ಯದಲ್ಲೇ ದೆಹಲಿಗೆ ಪ್ರಯಾಣ!
ಇದೇ ಸಂದರ್ಭದಲ್ಲಿ ತ್ರಿಸ್ಸೂರು ಮೂಲದ ನಟಿ ನಂದಿತಾ ಶಂಕರ ಅವರು ಬಸ್​ನಲ್ಲಿ ನಡೆದ ಘಟನೆಯನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. ಇದುವರೆಗೂ ಆ ವಿಡಿಯೋವನ್ನು 12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅನೇಕರು ನಂದಿತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮಗಾದ ಅದೇ ರೀತಿಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ಈ ಆತಂಕಕಾರಿ ಘಟನೆ ಮಂಗಳವಾರ ನಡೆದಿದೆ. ನಂದಿತಾ ಅವರು ಸಿನಿಮಾ ಶೂಟಿಂಗ್​ಗಾಗಿ ಎರ್ನಾಕುಲಂಗೆ ತೆರಳುತ್ತಿದ್ದರು. ಈ ವೇಳೆ ಅಂಗಮಾಲಿ ಬಳಿ ಆರೋಪಿ ಸಾವದ್​ ಬಸ್ಸನ್ನು ಏರಿದ. ಬಳಿಕ ಇಬ್ಬರು ಮಹಿಳೆಯರು ಮಧ್ಯೆ ಬಂದು ಕುಳಿತುಕೊಂಡನು. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಅವರು ಕೂಡ ಒಬ್ಬರು. ಬಸ್​ ಹೊರಡಲು ಆರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನೆ.
ಈ ಬಗ್ಗೆ ಮಾತನಾಡಿರುವ ನಂದಿತಾ, ನಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್​ ಕೆಲ ದೂರ ಸಾಗಿದ ಕೂಡಲೇ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್​ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್​ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ.
ಇದನ್ನೂ ಓದಿ:ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಮುಂದಿವೆ ಸಾಲು ಸಾಲು ಸವಾಲುಗಳು!
ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್​ ಜಿಪ್​ ಅನ್ನು ಹಾಕಿಕೊಂಡನು. ನಾನು ನನ್ನ ಧ್ವನಿಯನ್ನು ಜೋರು ಮಾಡಿದೆ. ಈ ವೇಳೆ ಬಸ್​ ಸಿಬ್ಬಂದಿ ಬಳಿ ಬಂದರು. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್​ ಕಂಡಕ್ಟರ್​ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್​ ಜಿಪ್​ ಓಪನ್​ ಆಗಿಲ್ಲ ಎಂದು ವಾದಿಸಿದನು. ಬಸ್​ ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಮತ್ತು ಬಸ್​ನ ಬಾಗಿಲು ತೆರೆಯುತ್ತಿದ್ದಂತೆ ಓಡಿ ಹೋದ. ಬಳಿಕ ಕಂಡಕ್ಟರ್​ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ​ ಚೇಸ್​ ಮಾಡಿ ಹಿಡಿದರು ಎಂದು ನಂದಿತಾ ಶಂಕರ ನಡೆದ ಘಟನೆಯನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.(ಏಜೆನ್ಸೀಸ್​)

A post shared by Nandita Sankara (@mastaanii_)

ಪ್ರತಿನಿತ್ಯ ಒಂದೊಂದು ಕೋಳಿ ಮೊಟ್ಟೆ ತಿಂತೀರಾ? ಹಾಗಿದ್ರೆ ಈ ಸುದ್ದಿ ಓದಿ…

ಕೈ ತಪ್ಪಿದ ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದ ಜಿ.ಪರಮೇಶ್ವರ್; ಹೈಕಮಾಂಡ್ ಜತೆ ಚರ್ಚಿಸಲು ಸಧ್ಯದಲ್ಲೇ ದೆಹಲಿಗೆ ಪ್ರಯಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
