ನವದೆಹಲಿ:ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಈಶಾನ್ಯ ದೆಹಲಿಯ ದಯಾಳ್​ಪುರದಲ್ಲಿ ನಡೆದಿದೆ.
ಗಾಯಾಳು ಯುವಕನನ್ನು ಸೋನು(19) ಹಾಗೂ ರಾಹುಲ್​(19) ಎಂದು ಗುರುತಿಸಲಾಗಿದ್ದು, ಆರೋಪಿ ಮೊಹಮ್ಮದ್​ ಜೈದ್(20)​ ತಲೆಮಾರಿಸಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಈಶಾನ್ಯ ದೆಹಲಿಯ ಬ್ರಿಜ್​ಪುರಿ ನಿವಾಸಿ ಸೋನು ತಮ್ಮ ಸಂಬಂಧಿಕರೊಬ್ಬರ ಜೊತೆ ಶಿಬ್ಬಾನ್​ ಸ್ಕೂಲ್​ ಬಳಿ ಇರುವ ಅಂಗಡಿಯೊಂದಲ್ಲಿ ಐಸ್​​ಕ್ರೀಂ ಸೇವಿಸಲು ತನ್ನ ಸಂಬಂಧಿ ರಾಹುಲ್ ಜೊತೆ ತೆರಳಿದ್ದರು. ಈ ವೇಳೆ ರಾಹುಲ್​ ಹಾಗೂ ಆರೋಪಿ ಮೊಹಮ್ಮದ್​ ಜೈದ್​ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.
VIDEO | Police deployment in Brij Puri area of Northeast Delhi after a youth allegedly stabbed two people with a knife over an argument.pic.twitter.com/FkK21XR5ec
ಈ ವೇಳೆ ಆರೋಪಿ ಜೈದ್​ ರಾಹುಲ್​ಗೆ ಚಾಕುವಿನಿಂದ ಸೊಂಟದ ಕೆಲಭಾಗಕ್ಕೆ ಇರಿದಿದ್ಧಾನೆ. ಜಗಳ ಬಿಡಿಸಲು ಹೋದ ಸೋನುವಿನ ಕೈಗೆ ಆರೋಪಿ ಇರಿದು ಪರಾರಿಯಾಗಿದ್ದಾನೆ. ರಕ್ತ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ:ನಟಿ ಖುಷ್ಬೂ ಸುಂದರ್​ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಆರೋಪಿ ಜೈದ್​ನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಗಾಯಾಳು ರಾಹುಲ್​ನ ತಂದೆ ಐಸ್​ಕ್ರೀಂ ಅಂಗಡಿಯೊಂದನ್ನು ನಡೆಸುತ್ತಿದ್ಧಾರೆ. ಇಬ್ಬರ ನಡುವೆ ಇಗೋ ಕ್ಲ್ಯಾಶ್​ ಇದ್ದ ಕಾರಣ ತಾವು ಮಾಡುತ್ತಿದ್ದ ವೃತ್ತಿಯ ಕುರಿತು ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಜೈದ್​ ಚಾಕುವಿನಿಮದ ಬರ್ಬರವಾಗಿ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವವರನ್ನು ತೀವರ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಜೈದ್​ ವಿರುದ್ಧ ಐಪಿಸಿ ಸೆಕ್ಷನ್​ 307(ಕೊಲೆ ಯತ್ನ), 324ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಬ್ರಿಜ್​ಪುರಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
