ಕೊಚ್ಚಿ:ಶೋರೂಮ್​ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಕೆಟಿಎಂ ಡ್ಯೂಕ್​ ಬೈಕ್​ ಅನ್ನು ಕದ್ದು ಪರಾರಿಯಾಗುತ್ತಿದ್ದ ಕೇರಳದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತನನ್ನು ಯುವಕನನ್ನು ಕಿರಣ್​ ಚಾಂದ್​ (27) ಎಂದು ಗುರುತಿಸಲಾಗಿದೆ. ಈತ ಕುರುವತ್ತೂರು ಮೂಲದ ನಿವಾಸಿ. ಮಲಪ್ಪುರಂ ಜಿಲ್ಲೆಯ ನಡಕ್ಕಾವು ಪಟ್ಟಣದ ಶೋರೂಮ್​ನಲ್ಲಿ ಬೈಕ್​ ಕದ್ದು ಪರಾರಿಯಾಗುತ್ತಿದ್ದ.
ಆರೋಪಿ ಕಿರಣ್ ಬೈಕ್ ತೆಗೆದುಕೊಂಡು ನೇರವಾಗಿ ಪಾಳೆಯಡ್ನಾಡ ಬಳಿಯ ಪೆಟ್ರೋಲ್ ಬಂಕ್​ಗೆ ತೆರಳಿದನು. ಆದರೆ, ಪೆಟ್ರೋಲ್​ ತುಂಬಿಸಿಕೊಳ್ಳಲು ಆತನ ಬಳಿ ಹಣ ಇರಲಿಲ್ಲ. ಬಳಿಕ ಮತ್ತೊಂದು ತಂತ್ರವನ್ನು ಅನುಸರಿಸಿದ ಕಿರಣ್​, ಪೆಟ್ರೋಲ್ ತುಂಬಿಸಿಕೊಂಡು, ಪೆಟ್ರೋಲ್​ ಬಂಕ್ ನೌಕರನ ಮೇಲೆ ಹಲ್ಲೆ ಮಾಡಿ, ಬೈಕ್‌ನಲ್ಲಿ ವೇಗವಾಗಿ ಎಸ್ಕೇಪ್​ ಆಗಲು ಯತ್ನಿಸಿದಾಗ, ಸ್ಥಳೀಯರು ಹಾಗೂ ಮತ್ತೊಬ್ಬ ನೌಕರ ಯುವಕನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ವಟಕರ ಠಾಣಾ ಪೊಲೀಸರಿಗೆ ಒಪ್ಪಿಸಲಾಯಿತು.
ಇದನ್ನೂ ಓದಿ:ದಿಗ್ವಿಜಯ ನ್ಯೂಸ್​ಗೆ ಎನ್​ಬಾ ರಾಷ್ಟ್ರೀಯ ಪ್ರಶಸ್ತಿಗಳ ಗರಿ: ವಿವಿಧ ವಿಭಾಗಗಳಲ್ಲಿ 8 ಪುರಸ್ಕಾರ; ಒಂದು ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕಕ್ಕೆ ಭಾಜನ
ಯುವಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ತಪ್ಪೊಪ್ಪಿಗೆ ಪ್ರಕಾರ ನಡಕ್ಕಾವು ಪಟ್ಟಣದ ಕೆವಿಆರ್​ ಶೋರಂನಲ್ಲಿ ಗ್ರಿಲ್ಸ್ ಮುರಿದು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೆಟ್ರೋಲ್​ ಬಂಕ್​ನಲ್ಲಿ ಇಂಧನ ತುಂಬಿದ ನಂತರ ಆರೋಪಿ ಕಿರಣ್, ಗೂಗಲ್ ಪೇ ಮೂಲಕ ಪಾವತಿಸುವುದಾಗಿ ಹೇಳಿದ್ದಾನೆ. ಆದರೆ, ಖಾತೆಗೆ ಹಣ ಬರದಿದ್ದಾಗ ಅನುಮಾನಗೊಂಡು ಬಂಕ್​ ಸಿಬ್ಬಂದಿ ಪ್ರಶ್ನೆ ಮಾಡಿದಾಗ, ಕಿರಣ್​ ನಾಟಕ ಬಯಲಾಗಿದೆ. ಆತನನ್ನು ಹಿಡಿದುಕೊಳ್ಳಲು ಯತ್ನಿಸಿದಾಗ, ಬಂಕ್​ನ ಒಬ್ಬ ನೌಕರನ ಮೂಗಿನ ಮೇಲೆ ಗುದ್ದಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಬೆನ್ನಟ್ಟಿದ ನಂತರ ಸ್ಥಳೀಯರು ಮತ್ತು ಇತರ ನೌಕರರು ಹಿಡಿದಿದ್ದಾರೆ.(ಏಜೆನ್ಸೀಸ್​)
ಹೂಂ ಅಂತೀರಾ.. ಉಹೂಂ ಅಂತೀರಾ?

ಅಸಡ್ಡೆ ಸಲ್ಲದು: ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್-ಪ್ರಿಂಟರ್ ನಿರ್ವಹಣೆಯ ಗೋಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 4 =
Remember me
