ನವದೆಹಲಿ:ಹಲವರು ಮಂದಿಗೆ ಅದರಲ್ಲಿಯೂ ಯುವಜನರಿಗೆ ಇದೀಗ ಬಗೆಬಗೆಯ ಪೋಸ್​ ಕೊಟ್ಟು ಫೋಟೋ ಇಲ್ಲವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದರೆಂದರೆ ಬಲು ಖುಷಿ. ಅದರಲ್ಲಿಯೂ ಇದೀಗ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡುವ ಹುಚ್ಚು ಹಲವರ ತಲೆಗೆ ಹತ್ತಿಬಿಟ್ಟಿದೆ.
ಕೆಲವರು ಈ ರೀತಿ ವಿಡಿಯೋ ಮಾಡಿ ಹಾಕಿದರೆ ಅವರಿಗೆ ಹಲವಾರು ಲೈಕ್ಸ್​, ಕಮೆಂಟ್​ ಬರುತ್ತಲೇ ಇರುತ್ತವೆ. ಇದು ಇನ್ನು ಕೆಲವರಿಗೆ ಸಹಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಡಿಯೋ ಕ್ಲಿಕ್​ ಆಗುವವನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಲೇ ಇರುತ್ತಾರೆ.
ಇದನ್ನೂ ಓದಿ:ಪ್ರವೇಶ ಕೊಡದ ಎಂಟು ಆಸ್ಪತ್ರೆಗಳು: 13 ಗಂಟೆ ಸುತ್ತಿ ಆಂಬ್ಯುಲೆನ್ಸ್​ನಲ್ಲೇ ಪ್ರಾಣಬಿಟ್ಟ ಗರ್ಭಿಣಿ!
ಇಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೇಲಿಂದ ಮೇಲೆ ಬಗೆಬಗೆಯ ಸ್ಟೈಲ್​ ಮಾಡಿ ವಿಡಿಯೋ ಮಾಡಿಕೊಂಡು ಅದನ್ನು ಟಿಕ್​ಟಾಕ್​ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಬಾಲಕನನ್ನು ಪಿಸ್ತೂಲು ಹಿಡಿದಿರುವ ಇಬ್ಬರು ಯುವಕರು ಅಟ್ಯಾಕ್​ ಮಾಡಿ ಬೆದರಿಸಿದ್ದಾರೆ.
ಬಾಲಕ ನಿಯಮಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ. ಇದನ್ನು ಸಹಿಸದ ಕಾರಣಕ್ಕೋ ಅಥವಾ ಇನ್ನಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಇಬ್ಬರು ಯುವಕರು ಪಿಸ್ತೂಲ್​ ಹಿಡಿದು ಬಂದು, ಬಾಲಕನ ತಲೆಗೆ ಗುರಿಯಿಟ್ಟು, ಇನ್ನು ಮುಂದೆ ವಿಡಿಯೋ ಅಪ್​ಲೋಡ್​ ಮಾಡದಂತೆ ಧಮಕಿ ಹಾಕಿದ್ದಾರೆ. ತಮ್ಮ ಮಾತನ್ನು ಮೀರಿ ವಿಡಿಯೋ ಮಾಡಿದರೆ ಶೂಟ್​ಔಟ್​ ಮಾಡುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ನಟಿ ಚಂದನಾ ಆತ್ಮಹತ್ಯೆ ಪ್ರಕರಣ: ಪ್ರಿಯಕರ ದಿನೇಶ್ ಅರೆಸ್ಟ್
ವಿಡಿಯೋ ಮಾಡಲು ಕ್ಯಾಮರಾ ಸಹಿತ ಬಂದಿದ್ದ ಬಾಲಕ ಈ ಯುವಕರ ನಡೆ ನೋಡಿ ಬೆವೆತು ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಿಡಿಯೋ ಮಾಡಲು ಒಂದು ಸ್ಥಳದಲ್ಲಿ ಕ್ಯಾಮರಾ ಫಿಕ್ಸ್​ ಮಾಡಿಟ್ಟುಕೊಂಡಿದ್ದ ಬಾಲಕ. ಈ ಹಿನ್ನೆಲೆಯಲ್ಲಿ ಯುವಕರು ಅಲ್ಲಿಗೆ ಬಂದು ಧಮಕಿ ಕೊಟ್ಟಿದ್ದು, ಅವರಿಗೆ ಹೆದರಿ ಬಾಲಕ ಓಡಿ ಹೋದದ್ದು ಎಲ್ಲವೂ ಆ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಭಾರಿ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಪತ್ನಿ ಮೇಲೆ ಸಂಶಯ: ಇಡೀ ಕುಟುಂಬವನ್ನು ಕೊಡಲಿಯಿಂದ ಕೊಚ್ಚಿದ ಪತಿ; ಇಬ್ಬರ ಕಗ್ಗೊಲೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − five =
Remember me
