ಕೊಟ್ಟಾಯಂ:ಪಂಚರ್​​ ಆದ ಟೈಯರ್​ನಲ್ಲೇ ಹಲವು ಕಿಲೋ ಮೀಟರ್​ಗಳವರೆಗೆ ಕಾರು ಚಲಾಯಿಸಿಕೊಂಡು ಹೋದ ಯುವಕನ ಮೇಲೆ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಪರೂಪದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಯುವಕನನ್ನು ಬಂಧಿಸದೇ ಪೊಲೀಸರು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಕಾರಣ ವಿಚಾರಣೆಯಲ್ಲಿ ಯುವಕ ನೀಡಿದ ಎಲ್ಲ ಮಾಹಿತಿಗಳು ಹಾಗೂ ದಾಖಲೆಗಳು ಸರಿಯಾಗಿದ್ದು, ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿರಿ:11 ಯುವತಿಯರನ್ನು ಮದ್ವೆಯಾಗಿ ವಂಚಿಸಿದ 23ರ ಯುವಕ: ಈತನ ಕಾಮಪುರಾಣ ಕೇಳಿ ಬೆಚ್ಚಿದ ಪೊಲೀಸರು!
ಈ ಘಟನೆ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಕೊಟ್ಟಾಯಂ ಥಿರವಂಬಡಿ ಬಳಿ ನಡೆದಿದೆ. ಪಂಚರ್​ ಟೈಯರಿನಲ್ಲಿ ಹಲವು ಕಿ.ಮೀ ವರೆಗೆ ಪ್ರಯಾಣ ಮಾಡಿದರಿಂದ ಕಾರಿನ ಬ್ರೇಕ್​ ಡಿಸ್ಕ್​ ಸಂಪೂರ್ಣ ಹಾನಿಯಾಗಿರುವುದು ಕಂಡುಬಂದಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಯುವಕ ಇಡುಕ್ಕಿಯಿಂದ ಕೊಟ್ಟಾಯಂ ಜಿಲ್ಲೆಯ ತನ್ನ ಪತ್ನಿ ಮನೆಗೆ ತೆರಳುತ್ತಿದ್ದ. ಈ ವೇಳೆ ಕಾರಿನ ಒಂದು ಟೈಯರ್​ ಪಂಚರ್​ ಆಗಿದೆ. ಬಳಿಕ ಇದ್ದ ಒಂದು ಟೈಯರ್​ ಅನ್ನು ಬದಲಾಯಿಸಿಕೊಂಡು ಪ್ರಯಾಣ ಮುಂದುವರಿಸಿದ್ದಾರೆ. ದುರುದೃಷ್ಟವಶಾತ್​ ಮತ್ತೊಂದು ಟೈಯರ್​ ಪಂಚರ್​ ಆಗಿದೆ.
ಯುವಕನ ಬಳಿ ಹೆಚ್ಚವರಿಯಾಗಿ ಒಂದೇ ಟೈಯರ್​ ಇತ್ತು. ಅಲ್ಲದೆ, ಮುಂಜಾನೆ ಆಗಿದ್ದರಿಂದ ಯಾವುದೇ ಪಂಚರ್​ ಅಂಗಡಿಗಳು ತೆರೆದಿರಲಿಲ್ಲ. ಬೇರೆ ಯಾವುದೇ ಆಯ್ಕೆಯಿಲ್ಲದೆ, ಕೊಟ್ಟಾಯಂ ಕಡೆಗೆ ಪಂಚರ್​ ಆದ ಕಾರಿನಲ್ಲೇ ಯುವಕ ತನ್ನ ಪ್ರಯಾಣ ಮುಂದುವರಿಸಿದ. ಇನ್ನಷ್ಟು ಅದೃಷ್ಟ ಕೆಟ್ಟಿತೋ ಏನೋ ಮತ್ತೊಂದು ಟೈಯರ್​ ಪಂಚರ್​ ಆಯಿತು. ಆದರೆ, ಇದು ಯುವಕನಿಗೆ ತಿಳಿದಿರಲಿಲ್ಲ.
ಇದನ್ನೂ ಓದಿರಿ:20 ರೂ. ನೀರಿನ ಬಾಟಲ್​ಗೆ 164 ರೂ. ಪಡೆದ ಹೋಟೆಲ್​: 5 ವರ್ಷದ ಹೋರಾಟಕ್ಕೆ ಗೆಲುವು, ಸಿಕ್ಕಿದ ಪರಿಹಾರವೆಷ್ಟು?
ಥಿರುವಂಬಾಡಿ ತಲುಪಿದಾಗ ವಾಹನದಿಂದ ಬಂದ ಭಾರಿ ಶಬ್ದ ಕೇಳಿದ ಸ್ಥಳೀಯರು ಏನೆಂದು ವಿಚಾರಿಸಲು ಮುಂದೆ ಬಂದಿದ್ದಾರೆ. ಆದರೆ, ಕಾರು ನಿಲ್ಲಿಸಿದ ಯುವಕ ತ್ವರಿತವಾಗಿ ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ. ಇದು ಸ್ಥಳೀಯರ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದರಿಂದ ಎಲ್ಲರು ಬೈಕ್ ತೆಗೆದುಕೊಂಡು ಕಾರನ್ನು ಹಿಂಬಾಲಿಸಿ, ಅರುಣೊತ್ತಿಮಂಗಳಂ ಬಳಿ ತಡೆದು ನಿಲ್ಲಿಸಿ ಕಡುಥುರುಥಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿ ವಶಕ್ಕೆ ಒಪ್ಪಿಸಿದರು.
ಆದರೆ, ವಿಚಾರಣೆಯಲ್ಲಿ ಯುವಕ ಎಲ್ಲವನ್ನು ವಿವಿರಿಸಿದ್ದರಿಂದ ಆತನನ್ನು ಸ್ವತಂತ್ರವಾಗಿ ಬಿಟ್ಟು ಕಳುಹಿಸಲಾಯಿತು.(ಏಜೆನ್ಸೀಸ್​)
ಬಾವಲಿ ಗುಹೆಯ ಭಯಾನಕ ಘಟನೆ ಬಿಚ್ಚಿಟ್ಟ ವುಹಾನ್​ ವಿಜ್ಞಾನಿಗಳು: ಡಬ್ಲ್ಯುಎಚ್​ಒ ಎದುರು ಬೆತ್ತಲಾಗುತ್ತಾ ಚೀನಾ?

ಮದ್ವೆ ಆಗು ಎಂದಿದ್ದಕ್ಕೆ ಕೊಂದೇಬಿಟ್ಟ, ಶವ ಬಾತ್​​ರೂಮಲ್ಲಿಟ್ಟು ಕಾಂಕ್ರೀಟ್​ ಕಟ್ದ; ಎರಡೂವರೆ ತಿಂಗಳ ಬಳಿಕ ಸಿಕ್ಕಿಹಾಕಿಕೊಂಡ..

ಅಶ್ಲೀಲ ಚಿತ್ರ ತೆಗೆದು ಧಮಕಿ ಹಾಕುತ್ತಿದ್ದ ಪತಿರಾಯನ ಕರಾಳ ಮುಖ ಬಿಚ್ಚಿಟ್ಟ ಪತ್ನಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
