ಮುಂಬೈ:ಈಗಿನ ಯುವಕರಲ್ಲಿ ಫೇಸ್​ಬುಕ್​, ಇನ್​ಸ್ಟಾಗ್ರಾಂ ಕ್ರೇಜ್ ಜಾಸ್ತಿಯೇ ಇದೆ. ಅದೇ ರೀತಿ ಕ್ರೇಜ್​ನಿಂದ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಹೋದ ಯುವಕನೊಬ್ಬ ಜೈಲು ಸೇರಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
20 ವರ್ಷದ ಇರ್ಫಾನ್ ಖಾನ್ ಬಂಧಿತ ಆರೋಪಿ. ಆತ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್ ಎನಿಸಿಕೊಂಡಿದ್ದಾನೆ. ಸಾಕಷ್ಟು ಫಾಲೋವರ್ಸ್ ಇರುವ ಆತ ಈವೆಂಟ್ ಮ್ಯಾನೇಜ್​ಮೆಂಟ್ ಕೂಡ ಮಾಡುತ್ತಿದ್ದನಂತೆ. ಹೇಗಾದರೂ ಮಾಡಿ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆಂದುಕೊಂಡ ಆತ ಒಂದು ವಿಡಿಯೋ ಮಾಡುವ ಪ್ಲಾನ್ ಮಾಡಿದ್ದಾನೆ.
ಪ್ರೀತಿಸಿ ಮೋಸ ಹೋದರೆ ಹೇಗೆ ಇರುತ್ತೇನೆಂದು ವಿಡಿಯೋದಲ್ಲಿ ತೋರಿಸಲು ಪ್ರಯತ್ನಿಸಿದ್ದಾನೆ. ತಾನು ರೈಲ್ವೆ ಹಳಿ ಮೇಲೆ ಕುಳಿತಂತೆ, ರೈಲು ಬಂದು ಅದರ ಅಡಿ ಸಿಲುಕಿ ಆತ ಪ್ರಾಣ ಬಿಟ್ಟಂತೆ ವಿಡಿಯೋ ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಆತ್ಮಹತ್ಯೆಗೆ ಪ್ರಚೋಧನೆ ಇರುವುದನ್ನು ಗಮನಿಸಿದ ಪೊಲೀಸರು ಇರ್ಫಾನ್​ಗಾಗಿ ಬಲೆ ಬೀಸಿದ್ದಾರೆ. ಶನಿವಾರ ಸಂಜೆ ಆತನನ್ನು ಬಂಧಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋಧನೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)
ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಯಡವಟ್ಟು

ಜಪಾನ್​ ಯುವತಿಯ ಭಾರತ ಪ್ರೀತಿ: ಹಿಂದಿಯಲ್ಲೇ ಮಾತನಾಡೋ ಬೆಡಗಿಗೆ ಪಾನಿಪುರಿ ಇಷ್ಟವಂತೆ

#BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 17 =
Remember me
